ಬೀದರ್: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೂರ್ವ ಸಿದ್ಧತೆಗಳಿಲ್ಲದೇ ಲಾಕ್ಡೌನ್ ಜಾರಿಗೊಳಿಸಿದ್ದರಿಂದ, ಹಲವೆಡೆ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ನಿಂದಾಗಿ ಅಂತರ್ ರಾಜ್ಯಗಳಲ್ಲಿ ಸಿಲುಕಿದ ವಲಸಿಗರು ಮನೆಗೆ ಕಾಲ್ನಡಿಗೆಯಲ್ಲಿ ವಾಪಾಸ್ ಆಗ್ತಿದ್ದಾರೆ. ಅವರ ಕಾಲಿಗೆ ಚಪ್ಪಲಿ ಇಲ್ಲ, ಜೇಬಿನಲ್ಲಿ ದುಡ್ಡಿಲ್ಲ, ಹೊಟ್ಟೆಗೆ ಊಟ ಇಲ್ಲ. ರಸ್ತೆ ಅಪಘಾತಗಳಲ್ಲಿ ಸಾವಾಗ್ತಿದೆ. ಇಷ್ಟೆಲ್ಲ ಆಗ್ತಿದ್ದರೂ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ಸರ್ಕಾರದ್ದಲ್ಲವೇ. ಪ್ರತಿಪಕ್ಷಗಳು ಪ್ರಶ್ನೆ ಮಾಡಿದ್ರೆ ದೇಶ ದ್ರೋಹಿ ಅಂತ ಪಟ್ಟ ಕಟ್ಟುತ್ತಾರೆ. ನಿಜವಾದ ದೇಶ ಪ್ರೇಮಿಗಳು ನಾವು ಎಂದು ಖಂಡ್ರೆ ಹೇಳಿದರು.