ಬೀದರ್ :ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸಮರೋಪಾದಿಯಲ್ಲಿ ಜನ ನಾಯಕರು ಮುಂದೆ ಬಂದಿರುವ ನಡುವೆ ಮೇವಿನ ಕೊರತೆಯಿಂದ ಬಳಲುತ್ತಿದ್ದ ಜಾನುವಾರುಗಳಿಗೆ ಮಹಿಳಾ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಗೋ ಶಾಲೆಗಳಿಗೆ ಮಹಿಳಾ ನಾಯಕಿಯರಿಂದ ಮೇವು ಸರಬರಾಜು..
ಔರಾದ್ ಪಟ್ಟಣದ ಅಮರೇಶ್ವರ ಗೋ ಶಾಲೆಯ ಜಾನುವಾರುಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ, ಕಾಂಗ್ರೆಸ್ ಮಹಿಳಾ ಮೊರ್ಚಾ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ತಾಲೂಕು ಪಂಚಾಯತ್ ಅಧ್ಯಕ್ಷೆ ಸವಿತಾ ಪಾಟೀಲ್ ನೇತೃತ್ವದಲ್ಲಿ ಹಲವು ನಾಯಕಿಯರು ಭೇಟಿ ನೀಡಿ ಮೇವು ನೀಡಿದರು.
ಲಾಕ್ ಡೌನ್: ಗೋ ಶಾಲೆಗಳಿಗೆ ಮಹಿಳಾ ನಾಯಕರಿಂದ ಮೇವು ಸರಬರಾಜು...!
ಜಿಲ್ಲೆಯ ಔರಾದ್ ಪಟ್ಟಣದ ಅಮರೇಶ್ವರ ಗೋ ಶಾಲೆಯ ಜಾನುವಾರುಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ, ಕಾಂಗ್ರೆಸ್ ಮಹಿಳಾ ಮೊರ್ಚಾ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ತಾಲೂಕು ಪಂಚಾಯತ್ ಅಧ್ಯಕ್ಷೆ ಸವಿತಾ ಪಾಟೀಲ್ ನೇತೃತ್ವದಲ್ಲಿ ಹಲವು ನಾಯಕಿಯರು ಭೇಟಿ ನೀಡಿ ಮೇವು ನೀಡಿದರು.
ಸುಡು ಬಿಸಿಲಿನ ಧಗೆಯಿಂದ ಬೆಂದು ಹೋಗಿದ್ದ ಜಾನುವಾರುಗಳ ಅರಣ್ಯರೋಧನದ ಕಡೆಗೆ ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಕೊರೊನಾ ವೈರಾಣು ವಿರುದ್ಧ ಹೋರಾಡಲು ಜಿಲ್ಲಾಡಳಿತದ ಜೊತೆಯಲ್ಲಿ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದೇವೆ ಎಂದರು.