ಬೀದರ್:ಜಿಲ್ಲೆಯ ಕಮಲನಗರ ಪಟ್ಟಣದ ವಿಶ್ವಾಸನಗರ, ಹಿಮ್ಮತ್ ನಗರ ಬಡಾವಣೆಯ ನಿವಾಸಿಗಳು ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿದ್ದಾರೆ. ಸುಮಾರು ಎರಡು ಸಾವಿರ ಜನ ವಸತಿ ಪ್ರದೇಶದ ಬಡಾವಣೆಯಲ್ಲಿ ಬಹುತೇಕರು ಕೂಲಿ ಕೆಲಸ ಮಾಡಿ ಉಪ ಜೀವನ ಮಾಡುತ್ತಿದ್ದು ಲಾಕ್ಡೌನ್ನಿಂದಾಗಿ ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ನೆರವಿಗಾಗಿ ಸರ್ಕಾರದತ್ತ ಮುಖ ಮಾಡಿರುವ ಇವರಿಗೆ ಪಡಿತರವೂ ಕೂಡಾ ಸಿಗುತ್ತಿಲ್ಲ. ಪಡಿತರ ಪೂರೈಸುವ ಅಧಿಕಾರಿಗಳೂ ಈ ಕಡೆ ತಲೆ ಹಾಕುತ್ತಿಲ್ಲ ಎಂಬುದು ಜನರ ಅಳಲಾಗಿದೆ.
'ಕೈಲಿರೋ ದುಡ್ಡು ಖಾಲಿಯಾಯ್ತು, ರೇಷನ್ ಕೊಡೋರು ಈ ಕಡೆ ತಲೆ ಹಾಕ್ತಿಲ್ಲ' - ಲಾಕ್ಡೌನ್ ಸಮಸ್ಯೆಗಳು
ಲಾಕ್ಡೌನ್ನಿಂದಾಗಿ ಜನರು ಪರದಾಡುತ್ತಿದ್ದಾರೆ. ಬೀದರ್ನ ಹಲವೆಡೆಯಂತೂ ಮನೆಯಿಂದ ಹೊರಗೂ ಬರಲಾಗದೇ, ಮನೆಯಲ್ಲಿಯೂ ಇರಲಾಗದೇ ಜನರು ಪರದಾಡುತ್ತಿದ್ದಾರೆ. ಊಟಕ್ಕೆ ಕೊರತೆ ಇರುವ ವೇಳೆ ಪಡಿತರ ಆಹಾರ ಸರಬರಾಜು ಮಾಡುವ ಅಧಿಕಾರಿಗಳು ಈ ಕಡೆ ತಿರುಗಿ ನೋಡ್ತಿಲ್ಲ ಅನ್ನೋದು ಜನರ ಅಳಲು.
!['ಕೈಲಿರೋ ದುಡ್ಡು ಖಾಲಿಯಾಯ್ತು, ರೇಷನ್ ಕೊಡೋರು ಈ ಕಡೆ ತಲೆ ಹಾಕ್ತಿಲ್ಲ' lockdown problems](https://etvbharatimages.akamaized.net/etvbharat/prod-images/768-512-6774775-thumbnail-3x2-raa.jpg)
ಲಾಕ್ಡೌನ್ ಸಮಸ್ಯೆಗಳು
ಲಾಕ್ಡೌನ್ ಸಮಸ್ಯೆಗಳು
ಲಾಕ್ ಡೌನ್ ಆರಂಭವಾದಾಗಿನಿಂದ ಹೊರಗೆ ಹೋದ್ರೆ ಪೊಲೀಸರು ಥಳಿಸ್ತಾರೆ. ಕೈಯಲ್ಲಿರುವ ಹಣದಲ್ಲಿ ಒಂದೆರಡು ವಾರ ದಿನಸಿ ತಂದು ಜೀವನ ಮಾಡಿದ್ದೇವೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ಬ್ರೇಕ್ ಬಿದ್ದಿದೆ. ಮಕ್ಕಳಿಗಾದ್ರೂ ಊಟಕ್ಕೆ ಸಿಗುತ್ತೆ ಎಂದ್ರೆ ಅದೂ ಆಗಿಲ್ಲ. ಮಕ್ಕಳಿಗೆ ಅಕ್ಕಿಯಾದ್ರು ಕೊಡಬೇಕಾಗಿತ್ತು ಆದರೆ ಏನೂ ಕೊಡಲಿಲ್ಲ. ಈ ವೇಳೆ ನೆರವಿಗೆ ಸರ್ಕಾರ ಬರಬೇಕು ಅನ್ನೋದು ಜನರು ಮನವಿ.