ಕರ್ನಾಟಕ

karnataka

ETV Bharat / state

ನಾಳೆಯಿಂದ ಮದ್ಯದಂಗಡಿ ಆರಂಭ: ಸಾಮಾಜಿಕ ಅಂತರ ಕಾಪಾಡಲು ಸಿದ್ಧತೆ - ಬೀದರ್​ನಲ್ಲಿ ಮದ್ಯದಂಗಡಿ ಆರಂಭ

ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ನಾಳೆಯಿಂದ ಮದ್ಯದಂಗಡಿಗಳು ತೆರೆದುಕೊಳ್ಳಲಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ.

Liquor store starts tomorrow
ನಾಳೆಯಿಂದ ಮದ್ಯದಂಗಡಿ ಆರಂಭ

By

Published : May 3, 2020, 9:54 PM IST

ಬೀದರ್: ಸುಮಾರು ಎರಡು ತಿಂಗಳಿಂದ ಬೀಗ ಹಾಕಲಾಗಿದ್ದ ಮದ್ಯದಂಗಡಿಗಳು ನಾಳೆಯಿಂದ ತೆರೆಯಲು ಅನುಮತಿ ಸಿಕ್ಕಿದೆ. ಸರ್ಕಾರ ಷರತ್ತುಬದ್ಧ ನಿಯಮಗಳೊಂದಿಗೆ ಅಂಗಡಿ ತೆರೆಯಲು ಅನುಮತಿ ನೀಡಿದ್ದು, ಜನದಟ್ಟಣೆ ನಿಯಂತ್ರಣಕ್ಕೆ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗುತ್ತಿದೆ.

ನಾಳೆಯಿಂದ ಮದ್ಯದಂಗಡಿ ಆರಂಭ

ಅಂಗಡಿಗಳ ಮುಂದೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಬೀದರ್​ಅನ್ನು ಕೆಂಪು ವಲಯದಿಂದ ಹಳದಿ ವಲಯಕ್ಕೆ ಸೇರಿಸಲಾಗಿದ್ದು, ಇದರಿಂದಾಗಿ ವ್ಯಾಪಾರ ವಹಿವಾಟುಗಳಲ್ಲಿ ಸಡಿಲಿಕೆ ನೀಡಲಾಗಿದೆ.

ನಗರದ ಗಾಂಧಿಗಂಜ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆದಿದ್ದು ಕಂಡು ಬಂತು. ಮತ್ತೊಂದು ಕಡೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ತೆರೆಯಲಾಗಿದೆ. ಬೀದರ್ ಸಹಜ ಸ್ಥಿತಿಗೆ ಬರುತ್ತಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ABOUT THE AUTHOR

...view details