ಕರ್ನಾಟಕ

karnataka

ETV Bharat / state

ಬ್ರೀಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್...  ರೋಗಿಗಳ ಪರದಾಟ - ರೋಗಿಗಳು, ಸಿಬ್ಬಂದಿಗಳು

ಬ್ರೀಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್- ಬಹುಮಹಡಿಯ ಕಟ್ಟಡದಲ್ಲಿ ಆರೋಗ್ಯ ಸೇವೆಗಾಗಿ ರೋಗಿಗಳು, ಸಿಬ್ಬಂದಿ ಪರದಾಟ- ನೂತನ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಲೆ ಇದೆ ಲಿಫ್ಟ್ ಅವಾಂತರ

ರೋಗಿಗಳ ಪರದಾಟ

By

Published : Apr 25, 2019, 1:10 PM IST

ಬೀದರ್:ಇಲ್ಲಿನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ಕೈ ಕೊಟ್ಟ ಪರಿಣಾಮ ರೋಗಿಗಳು ಹಾಗೂ ಸಿಬ್ಬಂದಿ ಬಹುಮಹಡಿ ಕಟ್ಟಡದಲ್ಲಿ ಆರೋಗ್ಯ ಸೇವೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷವಷ್ಟೇ ಹೊಸದಾಗಿ ನಿರ್ಮಾಣವಾದ ಜಿಲ್ಲಾಸ್ಪತ್ರೆಯಲ್ಲಿ ಲಿಫ್ಟ್ ಅವಾಂತರ ನಡೆಯುತ್ತಲೆ ಇದೆ. ಒಟ್ಟು ಆರು ಮಹಡಿಯ ಕಟ್ಟಡದ ಒಂದೊಂದು ಅಂತಸ್ಥಿನಲ್ಲೂ ಒಂದೊಂದು ಬಗೆಯ ಆರೋಗ್ಯ ಸೇವೆ ಒದಗಿಸಲಾಗಿದೆ‌. ಈಗ ಲಿಫ್ಟ್​ ಕೆಟ್ಟು ಚಿಕಿತ್ಸೆಗೆ ಬಂದ ರೋಗಿಗಳು, ಹೆರಿಗೆಗೆ ಬಂದ ಬಾಣಂತಿಯರು, ಅಷ್ಟೇ ಯಾಕೆ ಬ್ರೀಮ್ಸ್​ನ ಸಿಬ್ಬಂದಿ ಕೂಡ ಸಮಸ್ಯೆ ಎದುರಿಸುವಂತಾಗಿದೆ.

ಬ್ರೀಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್

6 ಮಹಡಿ ಕಟ್ಟಡವನ್ನು ಮೆಟ್ಟಿಲು ಮೂಲಕ ಹತ್ತಿ ಚಿಕಿತ್ಸೆ ಪಡೆಯುವ ದುಃಸ್ಥಿತಿ ರೋಗಿಗಳಿಗೆ ಎದುರಾಗಿದೆ. ಬ್ರೀಮ್ಸ್ ಆಸ್ಪತ್ರೆಯ ಈ ದುರಾವಸ್ಥೆ ಕಂಡು ಆಡಳಿತ ಮಂಡಳಿ ವಿರುದ್ಧ ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ABOUT THE AUTHOR

...view details