ಬಸವಕಲ್ಯಾಣ(ಬೀದರ್):ಆನ್ಲೈನ್ನಲ್ಲಿ ಪರಿಚಿತನಾದ ವ್ಯಕ್ತಿಗೆ ಹಣ ಹಾಕಿ ಮೋಸ ಹೋಗಿದ್ದರಿಂದ ನೊಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.
ಇಸ್ಲಾಂಪೂರ ಗ್ರಾಮದ ಆರತಿ ಕನಾಟೆ (28) ಎಂಬುವರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದವರು. ನಗರದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರತಿ ಅವರಿಗೆ ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬ ಪರಿಚಯವಾಗಿದ್ದರಂತೆ.
ಉಪನ್ಯಾಸಕಿಯು ತಮ್ಮ ಕೈಯಲ್ಲಿದ್ದ ಹಣ ಸೇರಿದಂತೆ ಸಾಲ ಮಾಡಿ ಹಂತ-ಹಂತವಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಹಣವನ್ನು ವ್ಯಕ್ತಿ ಬಳಿ ಹೂಡಿಕೆ ಮಾಡಿದ್ದರು. ಇನ್ನೂ 82 ಸಾವಿರ ಹಾಕಿದರೆ ಮಾತ್ರ ನಿಮ್ಮೆಲ್ಲ ಎಲ್ಲ ಹಣ ವಾಪಸ್ ಬರುತ್ತದೆ ಎಂದು ಆ ವ್ಯಕ್ತಿ ನಂಬಿಸಿದ್ದರಂತೆ. ಹೀಗಾಗಿ ಉಳಿದ ಹಣ ಭರಿಸಲಾಗದೇ ಜೀವನದಲ್ಲಿ ಜುಗುಪ್ಸೆಗೊಂಡು ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.