ಬಸವಕಲ್ಯಾಣ( ಬೀದರ್): ಜಿಲ್ಲೆಯ ಬಸವಕಲ್ಯಾಣದ ವಾರ್ಡ್ ನಂ 11 ಹಾಗೂ ವಾರ್ಡ್ 4ರ ಮಧ್ಯೆ ಬರುವ ಅನ್ವರ್ಪೇಟ್, ನರಿಗಾರಗಲ್ಲಿಯಲ್ಲಿ ಪ್ರವೇಶಗಳು ಸೂಕ್ತ ಮೂಲ ಸೌಕರ್ಯವಿಲ್ಲದೇ ಕೊರಗುತ್ತಿದ್ದು, ಅಲ್ಲಿಗೆ ಹೋದ್ರೆ ಸಾಕು ಗಬ್ಬೆದ್ದು ನಾರುತ್ತಿವೆ.
ಬಸವಕಲ್ಯಾಣದ ಜನರಿಗೆ ರೋಗ ಭಾಗ್ಯ, ಕಾರಣ!? - ಬಸವಕಲ್ಯಾಣದಲ್ಲಿ ಮೂಲಭೂತ ಸೌಲಭ್ಯದ ಕೊರತೆ
ಬಸವಕಲ್ಯಾಣದಲ್ಲಿ ಬಡಾವಣೆಯೊಂದರಲ್ಲಿ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ವಿಪರಿತವಾಗಿದ್ದು, ಮಕ್ಕಳು, ವೃದ್ದರಲ್ಲಿ ವಾಂತಿ ಭೇದಿ ಸೇರಿ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಹರಡಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಹೌದು ಅಲ್ಲಿ ನಿಲ್ಲೋಕೆ ಆಗದಷ್ಟು ಮಲ ಮೂತ್ರದ ದುರ್ಗಂಧ ಬೀರುತ್ತದೆ. ಸರಿಯಾದ ರಸ್ತೆ ಇಲ್ಲ. ಹೆಸರಿಗೆ ಮಾತ್ರ ಎನ್ನುವಂತೆ ಚರಂಡಿ ವ್ಯವಸ್ಥೆ ಇದ್ದರೂ ಅದನ್ನ ಸ್ವಚ್ಚಗೊಳಿಸಿ ಎಷ್ಟು ತಿಂಗಳು ಕಳೆದಿವೆಯೋ ಗೊತ್ತಾಗುತ್ತಿಲ್ಲ. ಮಣ್ಣಿನ ರಸ್ತೆ ಇದ್ರು ಅದರಲ್ಲಿ ಹರಡಿದ ಚರಂಡಿ ನೀರಿನಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಲ್ಲಿಯಲ್ಲಿಯ ರಸ್ತೆ ಬದಿಗೆ ಇರುವ ಚರಂಡಿಗಳಲ್ಲಿ ನೀರು ತುಂಬಿ ತುಳುಕ್ಕುತ್ತಿದೆ.
ನಗರದ ಮೂಲ ಸೌಕರ್ಯಗಳ ಅಭಿವೃದ್ದಿಗೆಂದು ವಿವಿಧ ಯೋಜನೆಗಳ ಮೂಲಕ ಸರ್ಕಾರದಿಂದ ನಗರಸಭೆಗೆ ಕೋಟ್ಯಂತರ ರೂ.ಅನುದಾನ ಹರಿದು ಬರುತಿದ್ದರೂ ಇದುವರೆಗೂ ಇಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ. ಸ್ವಚ್ಚತೆಗೆ ಎಂದು ಸಾಕಷ್ಟು ಸಿಬ್ಬಂದಿ ನಮ್ಮ ಗಲ್ಲಿಯಲ್ಲಿ ಸ್ವಚ್ಚ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.