ಬಸವಕಲ್ಯಾಣ: ಮನೆ ಮೇಲೆ ಮಲಗಿದ ಕಾರ್ಮಿಕನೊಬ್ಬ ರಾತ್ರಿವೇಳೆ ನಿದ್ರಾವಸ್ಥೆಯಲ್ಲಿ ಮನೆ ಮೇಲಿಂದ ಆಯ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ನಿದ್ರಾವಸ್ಥೆಯಲ್ಲಿ ಮನೆ ಮೇಲಿಂದ ಬಿದ್ದು ಕಾರ್ಮಿಕ ಸಾವು - ಬಸವಕಲ್ಯಾಣ ಮನೆ ಮೇಲಿಂದ ಬಿದ್ದು ಕಾರ್ಮಿಕ ಸಾವು
ಮನೆಯ ಮೇಲೆ ಮಲಗಿದ್ದಾಗ ನಿದ್ರಾವಸ್ಥೆಯಲ್ಲಿ ಮೂತ್ರ ವಿಸರ್ಜನೆಗೆಂದು ತೆರಳಿದ ವ್ಯಕ್ತಿಯೊರ್ವ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಸವಕಲ್ಯಾಣದಲ್ಲಿ ಜರುಗಿದೆ.
ಕಾರ್ಮಿಕ ಸಾವು
ಮಹಾರಾಷ್ಟ್ರದ ಸೊಲ್ಲಾಪೂರ್ ನಿವಾಸಿ ರವಿ ನರಸಪ್ಪ ಬಾಡೇಕರ್ (50) ಮೃತ ಕಾರ್ಮಿಕ. ಮನೆ ಕಟ್ಟಡ ಕೆಲಸಕ್ಕೆಂದು ಆಗಮಿಸಿದ್ದ ನರಸಪ್ಪ, ನಗರದ ಸದ್ಗುರು ಸದಾನಂದ ಸ್ವಾಮೀ ಮಠದ ಹಿಂಭಾಗದ ಬಡಾವಣೆಯಲ್ಲಿನ ಮನೆಯ ಮೇಲೆ ಮಲಗಿದ್ದ. ನಿದ್ರಾವಸ್ಥೆಯಲ್ಲಿ ಮೂತ್ರ ವಿಸರ್ಜನೆಗೆಂದು ತೆರಳಿದ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.