ಬೀದರ್: ಲೋಕಸಭಾ ಕ್ಷೇತ್ರದ ಟಿಕೆಟ್ ಕ್ಷತ್ರಿಯ ಸಮಾಜಕ್ಕೆ ಕೊಡಲೇಬೇಕು ಎಂದು ಕ್ಷತ್ರಿಯ ಸಮಾಜ ಸಂಘ ಬೀದರ್ನಲ್ಲಿ ಒತ್ತಾಯಿಸಿದೆ.
ಕ್ಷತ್ರಿಯ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಲು ಒತ್ತಾಯ - undefined
ಕ್ಷತ್ರಿಯ ಸಮಾಜಕ್ಕೆ ಬೀದರ್ನಲ್ಲಿ ಟಿಕೆಟ್ ನೀಡಬೇಕೆಂದು ಕ್ಷತ್ರಿಯ ಸಮಾಜ ಸಂಘ ಒತ್ತಾಯಿಸಿದೆ.

ಕ್ಷತ್ರಿಯ ಸಮಾಜ ಸಂಘ
ನಗರದಲ್ಲಿ ಕ್ಷತ್ರಿಯ ಸಮಾಜದ ಮುಖಂಡರು ಸಭೆ ಸೇರಿ ಮಾಜಿ ಸಿಎಂ ದಿ. ಧರಂಸಿಂಗ್ ಪುತ್ರ ವಿಜಯಸಿಂಗ್ ಅವರಿಗೆ ಬೀದರ್ ಕ್ಷೇತ್ರದ ಟಿಕೆಟ್ ನೀಡಬೇಕು. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಹೆಸರು ಫೈನಲ್ ಎಂದು ಕೈ ನಾಯಕರು ಹೇಳ್ತಿದ್ದಾರೆ.
ಕ್ಷತ್ರಿಯ ಸಮಾಜ ಸಂಘ
ಹೀಗಾದ್ರೆ ನಮಗೆ ಅನ್ಯಾಯವಾಗುತ್ತೆ. ಸಂಸದರಾಗಿದ್ದ ಧರಂಸಿಂಗ್ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ಈ ಕ್ಷೇತ್ರದಲ್ಲಿ ಗೆಲುವು ಸುಲಭ ಎಂದು ಹೇಳಿರುವ ಸಮಾಜದ ಮುಖಂಡರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿಯೂ ಈ ಕುರಿತು ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.