ಕರ್ನಾಟಕ

karnataka

ETV Bharat / state

ಕೊರೊನಾದಿಂದ ಮುಕ್ತಿ ಪಡೆಯಲು ಈಶ್ವರ ಖಂಡ್ರೆಯಿಂದ ಇಷ್ಟಲಿಂಗ ಪೂಜೆ - ಇಷ್ಟಲಿಂಗ ಪೂಜೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಮ್ಮ ತಂದೆಯವರೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

istalinga pooje
ಇಷ್ಟಲಿಂಗ ಪೂಜೆ

By

Published : Apr 14, 2020, 7:46 AM IST

ಬೀದರ್: ಸಹಜ ಶಿವಯೋಗದ ಮೂಲಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮಾಹಾಮಾರಿ ಕೊರೊನಾ ವೈರಸ್​ನಿಂದ ಮನುಕುಲಕ್ಕೆ ಮುಕ್ತಿ ಸಿಗಲೆಂದು ನೀಡಲಾಗಿದ್ದ ಕರೆಗೆ ಸ್ಪಂದಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಮ್ಮ ತಂದೆಯವರೊಂದಿಗೆ ಪೂಜೆ ನೆರವೇರಿಸಿದ್ದಾರೆ.

ಜಿಲ್ಲೆಯ ಭಾಲ್ಕಿ ಪಟ್ಟಣದ ನಿವಾಸದಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಇಷ್ಟಲಿಂಗ ಪೂಜೆ ಮಾಡಿದ್ದಾರೆ. ವಿಭೂತಿ ಹಚ್ಚಿಕೊಂಡು ಕೈಯಲ್ಲಿ ಲಿಂಗ ಹಿಡಿದು ಶಿವಪೂಜೆ ಮಾಡಿದ್ದಾರೆ.

ಇನ್ನು ಓಂ ನಮಃ ಶಿವಾಯ ಜಪ ಮಂತ್ರ ಪಠಣ ಮಾಡುವ ಮೂಲಕ ಮನುಕುಲಕ್ಕೆ ಬಂದ ಗಂಡಾಂತರ ದೂರ ಮಾಡುವಂತೆ ಶಿವನ ಬಳಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details