ಕರ್ನಾಟಕ

karnataka

ETV Bharat / state

4 ಜಿಲ್ಲಾ ನ್ಯಾಯಾಲಯದಲ್ಲಿದೆ ಉದ್ಯೋಗಾವಕಾಶ: ಜವಾನ, ಟೈಪಿಸ್ಟ್​​ ಸೇರಿದಂತೆ ಹಲವು ಹುದ್ದೆಗಳು

District Court Recruitment: ರಾಜ್ಯದ ಪ್ರಮುಖ ನಾಲ್ಕು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Kodagu, raichur, dakshina kannada and bidar district court job notification
Kodagu, raichur, dakshina kannada and bidar district court job notification

By ETV Bharat Karnataka Team

Published : Nov 30, 2023, 2:27 PM IST

ಬೆಂಗಳೂರು: ರಾಯಚೂರು, ಬೀದರ್​, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಜವಾನ, ಟೈಪಿಸ್ಟ್, ಸ್ಟೆನೋಗ್ರಾಫರ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

  • ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ: ಇಲ್ಲಿ ಒಟ್ಟು 54 ಹುದ್ದೆಗಳು ಖಾಲಿ ಇವೆ. ಶೀಘ್ರ ಲಿಪಿಗಾರ ಹುದ್ದೆ 10, ಬೆರಳಚ್ಚುಗಾರ ಹುದ್ದೆ 6, ಬೆರಳಚ್ಚು-ನಕಲುಗಾರ ಹುದ್ದೆ- 2, ಜವಾನ ಹುದ್ದೆಗಳು -36
  • ಬೀದರ್​ ಜಿಲ್ಲಾ ನ್ಯಾಯಾಲಯ: ಇಲ್ಲಿ 9 ಶೀಘ್ರ ಲಿಪಿಗಾರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
  • ಕೊಡಗು ಜಿಲ್ಲಾ ನ್ಯಾಯಾಲಯ: ಇಲ್ಲಿ ಒಟ್ಟು 64 ಹುದ್ದೆಗಳು ಖಾಲಿ ಇವೆ. ಸ್ಟೆನೋಗ್ರಾಫರ್​​ 2, ಟೈಪಿಸ್ಟ್​​ 17, ಟೈಪಿಸ್ಟ್​- ಕಾಪಿಸ್ಟ್​​ 7, ಪ್ರೊಸೆಸ್​ ಸರ್ವರ್​ 8, ಜವಾನ 30.
  • ರಾಯಚೂರು ಜಿಲ್ಲಾ ನ್ಯಾಯಾಲಯ: ಸ್ಟೆನೋಗ್ರಾಫರ್ ಗ್ರೇಡ್​ 3 - 1, ಟೈಪಿಸ್ಟ್​​ - 8, ಟೈಪಿಸ್ಟ್​- ಕಾಪಿಸ್ಟ್ - ​ 1, ಪ್ರೊಸೆಸ್​ ಸರ್ವರ್​​ - 5, ಜವಾನ - 10, ಚಾಲಕ - 1

ವಿದ್ಯಾರ್ಹತೆ:ಜವಾನ, ಚಾಲಕರ ಹುದ್ದೆ ಹೊರಾತಾಗಿ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪರೀಕ್ಷೆಯಲ್ಲಿ ಟೈಪಿಂಗ್​ ಮತ್ತು ಶೀಘ್ರ ಲಿಪಿಗಾರ ಪರೀಕ್ಷೆಯಲ್ಲಿ ಸೀನಿಯರ್​​​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜವಾನ ಮತ್ತು ಚಾಲಕರ ಹುದ್ದೆಗೆ 10ನೇ ಪರೀಕ್ಷೆ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಟೈಪಿಂಗ್​ ಪರೀಕ್ಷೆ, ಕಂಪ್ಯೂಟರ್​ ಸಾಕ್ಷರತೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ನಿಗದಿತ ನ್ಯಾಯಾಲಯದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಡಿಸೆಂಬರ್​ 5 ಕಡೆಯ ದಿನವಾದರೆ, ಕೊಡುಗು ಜಿಲ್ಲಾ ನ್ಯಾಯಾಲಯದ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಡಿಸೆಂಬರ್​ 10, ಬೀದರ್​​, ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 6 ಆಗಿದ್ದು, ರಾಯಚೂರು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 21 ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಕೆಳಗಿನ ಜಾಲತಾಣಗಳಿಗೆ ಭೇಟಿ ನೀಡಬಹುದಾಗಿದೆ.

  • ರಾಯಚೂರು: raichur.dcourts.gov.in
  • ಕೊಡಗು: kodagu.dcourts.gov.in/notice-category/recruitments/
  • ಬೀದರ್​:bidar.dcourts.gov.in
  • ದಕ್ಷಿಣ ಕನ್ನಡ: dk.dcourts.gov.in

ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ: 995 ಹುದ್ದೆಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details