ಕರ್ನಾಟಕ

karnataka

ETV Bharat / state

ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ.. ಬೀದರ್​ ಜಿಲ್ಲೆಯಲ್ಲಿ ಹರಿದ ನೆತ್ತರು - ETv Bharat Kannada News

ತಲೆ ಹಾಗೂ ಮುಖದ ಮೇಲೆ ಕಲ್ಲು ಎತ್ತು ಹಾಕಿ ಭೀಕರ ಕೊಲೆ- ಅಪರಿಚಿತ ಮೃತ ವ್ಯಕ್ತಿಯ ಹತ್ಯೆ- ಬೀದರ್​ ಜಿಲ್ಲೆಯಲ್ಲಿ ಪ್ರಕರಣ

Barbaric killing of the person
ವ್ಯಕ್ತಿ ಬರ್ಬರ ಹತ್ಯೆ

By

Published : Jan 1, 2023, 9:18 PM IST

ಬೀದರ್ :ತಲೆ ಹಾಗೂ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಮನಾಬಾದ್ ಪಟ್ಟಣದ ಹೊರವಲಯದ ಧುಮ್ಮನಸೂರದಲ್ಲಿ ಭಾನುವಾರ ನಡೆದಿದೆ.

ಧುಮ್ಮನಸೂರ ಶಿವಾರದ ಹಜರತ್ ಸೈಯದ್ ಇಬನ್ ಶಾ ವಾಲಿ, ಸರಕಾರ ರಹೆಮತ್ತೊಲ್ಲಾ ಅಲೆ ದರ್ಗಾದ ಹಿಂಭಾಗದಲ್ಲಿ ಕೊಲೆ ನಡೆದಿದೆ. ಕೊಲೆಗೀಡಾದ ವ್ಯಕ್ತಿ ಅಪರಿಚಿತನಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ವ್ಯಕ್ತಿಯ ಕೈಯಲ್ಲಿ ಮೂರು ಉಂಗುರ, ಕೈಗಡಿಯಾರ ಇದ್ದು, ಜೇಬಿನಲ್ಲಿ ಪೆನ್ನು, ಕಾಲಿಗೆ ಬೂಟು ಧರಿಸಿದ್ದಾರೆ. ಕೊಲೆಯಾದ ವ್ಯಕ್ತಿ ದೇಹದ ಹತ್ತಿರ ಎರಡು ಕನ್ನಡಕಗಳು ಕಂಡುಬರುತ್ತಿದ್ದು, ಮುಖ ಸಂಪೂರ್ಣ ನಜ್ಜುಗುಜ್ಜಾಗಿದೆ. ನೂರಾರು ಜನರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರೂ ಮೃತ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ.

ಅಪರಿಚಿತ ಕೊಲೆಯಾದ ವ್ಯಕ್ತಿಯ ಕುರಿತು ಮಾಹಿತಿ ಇದ್ದವರು ಕೂಡಲೇ 9480803452 ಅಥವಾ 9480803435 ಈ ಸಂಖ್ಯೆಯನ್ನು ಸಂಪರ್ಕ ಮಾಡಬೇಕೆಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಬಾರಿ ಕಲ್ಲಿನಿಂದ ಜಜ್ಜಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ

ABOUT THE AUTHOR

...view details