ಬಸವಕಲ್ಯಾಣ:ನೀವು ಇಲ್ಲಿಗೆ ಬಂದ ಮೇಲೆ ನೂರಾರು ಕೋಟಿ ರೂ. ಬೆಲೆ ಬಾಳುವ 32 ಸರ್ಕಾರಿ ಸ್ಥಳಗಳನ್ನು ಖಾಸಗಿ ವ್ಯಕ್ತಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ನೀವೇನು ಮಾಡುತಿದ್ದೀರಾ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸವಿತಾ ಸಮಾಜಕ್ಕೆ ಸೇರಿದ 20 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿ ಕಬ್ಜಾ ಮಾಡಿದ್ದಾರೆ. ಈ ಸಂಬಂಧ ತಹಶೀಲ್ದಾರ ಸೇರಿದಂತೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದ್ರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಅಳಲು ತೋಡಿಕೊಂಡರು.
ಖಾಸಗಿಯವರಿಂದ 32 ಸರ್ಕಾರಿ ಸ್ಥಳಗಳ ಕಬ್ಜ : ತಹಶೀಲ್ದಾರರ ವಿರುದ್ಧ ಖೂಬಾ ಗರಂ ಸವಿತಾ ಸಮಾಜದ ಪ್ರಮುಖರಿಂದ ಸಮಸ್ಯೆ ಆಲಿಸಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ತಕ್ಷಣ ತಹಶೀಲ್ದಾರರ ಜೊತೆ ದೂರವಾಣಿ ಮೂಲಕ ಮಾತನಾಡಿ, ನೀವು ಇಲ್ಲಿಗೆ ಬಂದ ಮೇಲೆ ನಗರ ಸೇರಿದಂತೆ ಸುತ್ತಲಿನ 32 ಸರ್ಕಾರಿ ಸ್ಥಳಗಳನ್ನು ಖಾಸಗಿ ವ್ಯಕ್ತಿಗಳು ಕಬ್ಜಾ ಮಾಡಿದ್ದಾರೆ. ಆದರೆ ನೀವು ಮತ್ತು ನಿಮ್ಮ ಇಲಾಖೆ ಅಧಿಕಾರಿಗಳು ಏನು ಮಾಡುತಿದ್ದಾರೆ.? ಚುನಾವಣೆ ಸಮಯದಲ್ಲಿ ಇಂತಹ ಸಮಸ್ಯೆ ಉದ್ಭವಿಸಿದಲ್ಲಿ ಸರ್ಕಾರ ಮತ್ತು ಪಕ್ಷದ ಹೆಸರಿಗೆ ಧಕ್ಕೆ ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಮ್ಮ ಜೊತೆ ನಾನೂ ಹೋರಾಟ ಮಾಡುವ ಮೂಲಕ ಸವಿತಾ ಸಮಾಜಕ್ಕೆ ನ್ಯಾಯಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.