ಬಸವಕಲ್ಯಾಣ:ಶಿವಪೂರ ಐತಿಹಾಸಿಕ ಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ... ಕಾರ್ತಿಕ ಮಾಸದ ನಿಮಿತ್ತ ಸಿದ್ದೇಶ್ವರ ದೇವಾಲಯದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿದ್ದೇಶ್ವರ ದೇವಾಲಯದಲ್ಲಿ ಭಕ್ತಿ, ಶ್ರದ್ಧೆಯಿಂದ ಪ್ರತಿ ವರ್ಷ ದೀಪೋತ್ಸವ ಆಚರಿಸಿಕೊಂಡು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆವರಣದಲ್ಲಿ ಹಾಗೂ ಕೆರೆಯ ದಂಡೆಯಲ್ಲಿ, ದೇವಾಲಯದ ಮುಂಭಾದಲ್ಲಿರುವ ಪುಷ್ಕರಣಿಯ ಮುಟ್ಟಿಲುಗಳ ಮೇಲೆ ಸಾಲು-ಸಾಲು ದೀಪಗಳನ್ನು ಬೆಳಗಿಸಲಾಯಿತು. ದೀಪಗಳ ಬೆಳಕಿನಿಂದ ಪುಷ್ಕರಣಿ ಅಲಂಕೃತಗೊಂಡಿದ್ದು, ನೆರದಿದ್ದ ಭಕ್ತರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ, ಪ್ರಮುಖರಾದ ಶರಣು ಸಲಗರ್, ಶಿವರಾಜ ಬಾಲಿಕಿಲೆ, ಸಮಿತಿ ಪ್ರಮುಖರಾದ ಅನಿಲ್ ಸ್ವಾಮಿ, ಅನಿಲ ಮಠಪತಿ, ನವನಾಥ ಪೊದ್ಧಾರ, ಧೋಂಡಿಬಾ ಪೂಜಾರಿ, ಮಹೇಶ ಉಮರ್ಗೆ, ಅನಿಲ್ ಉಮರ್ಗೆ ಉಪಸ್ಥಿತರಿದ್ದರು. ಬಸವಕಲ್ಯಾಣ ನಗರ, ಶಿವಪೂರ ಗ್ರಾಮ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿದ್ದರು.