ಬಸವಕಲ್ಯಾಣ: ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 532ನೇ ಜಯಂತ್ಯುತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ವತಿಯಿಂದ ನಗರದಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ನಗರದ ಕೋಟೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಗಾಂಧಿ ವೃತ್ತ, ಬಸವ ವೃತ್ತದ ಮೂಲಕ ರಥ ಮೈದಾನದ ಸಭಾ ಭವನದವರೆಗೆ ಮೆರವಣಿಗೆ ಜರುಗಿತು. ತಾಳ, ಮೇಳ, ವಾದ್ಯಗಳೊಂದಿಗೆ ಅಲಂಕೃತ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಯುವಕರ ನೃತ್ಯ ಹಾಗೂ ಕಲಾವಿದರಿಂದ ನಡೆದ ಡೊಳ್ಳು ಪ್ರದರ್ಶನ ಗಮನ ಸೆಳೆಯಿತು.
ಬಸವಕಲ್ಯಾಣದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಕೋಟೆಯ ಬಳಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಡೊಳ್ಳು ಭಾರಿಸುವ ಮೂಲಕ ಜಿ.ಪಂ. ಅಧ್ಯಕ್ಷೆ ಗೀತಾ ಚಿದ್ರಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಬಿ. ನಾರಾಯಣರಾವ್, ಜಿ.ಪಂ. ಸದಸ್ಯೆ ನಿರ್ಮಲಾ ಮಾನೆಗೋಪಾಳೆ, ಮುಖಂಡ ಪಂಡಿತರಾವ್ ಚಿದ್ರಿ, ಸುಭಾಷ ರೇಕುಳಗಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆಯ ತಾಲೂಕು ಅಧ್ಯಕ್ಷ ಜ್ಞಾನೇಶ್ವರ ಅತಲಾಪೂರ, ಗೌರವಾಧ್ಯಕ್ಷ ನವನಥ ಮೇತ್ರೆ, ನಗರಾಧ್ಯಕ್ಷ ಪ್ರದೀಪ ಬೇಂದ್ರೆ, ಉಪಾಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಗರದ ನಾರಾಯಣಪೂರ ಕ್ರಾಸ್ ಬಳಿಯ ಶ್ರೀ ಬೊಮ್ಮಗೊಂಡೇಶ್ವರ ವೃತ್ತದಲ್ಲಿ, ಹೊಸ ಭಾವಚಿತ್ರ ಪ್ರತಿಷ್ಠಾಪನೆಯನ್ನು ಜಿ.ಪಂ. ಅಧ್ಯಕ್ಷೆ ಗೀತಾ ಚಿದ್ರಿ ನೆರವೇರಿಸಿದರು.