ಬಸವಕಲ್ಯಾಣ: ಸೇಡಂನ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಆಶ್ರಯದಲ್ಲಿ ನಗರದ ರಥ ಮೈದಾನದಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕದ ಯುವ ಸಂಸತ್ತು-2020 ಹಾಗೂ ವಸ್ತು ಪ್ರದರ್ಶನ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ವಿವಿಧೆಡೆಯಿಂದ ಆಗಮಿಸಿದ ಕಲಾವಿದರು, ವ್ಯಾಪಾರಿಗಳು, ಕುಶಲಕರ್ಮಿಗಳು ನಾನಾ ಬಗೆಯ ವಸ್ತುಗಳ ಪ್ರದರ್ಶಿಸಿದರು. ಪುಸ್ತಕ ಪ್ರಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು, ಶರಣ ಸಾಹಿತ್ಯ, ಧಾರ್ಮಿಕ ಚಿಂತನೆಗಳ ಗ್ರಂಥಗಳು, ಚಿತ್ರಕಲೆಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ತಮಗೆ ಬೇಕಾದ ಗ್ರಂಥಗಳನ್ನು ಖರೀದಿಸಿದರು.