ಕರ್ನಾಟಕ

karnataka

ETV Bharat / state

ಬೀದರ್​ ರೈತರ ಸಮಸ್ಯೆಗೆ ಸಿಕ್ತು ಪರಿಹಾರ... ಇದು 'ಈಟಿವಿ ಭಾರತ್​' ಇಂಪ್ಯಾಕ್ಟ್​ - solved bidar district farmers problem

ಹಲವು ವರ್ಷಗಳಿಂದ ಬೀದರ್​ ರೈತರು ಎದುರಿಸುತ್ತಿದ್ದ ವಿದ್ಯುತ್ ತಂತಿ ಸಮಸ್ಯೆಯ ಕುರಿತು ಈಟಿವಿ ಭಾರತ್​ ಸುದ್ದಿ ಪ್ರಕಟಿಸಿತ್ತು. ಈ ಮೂಲಕ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ವಿದ್ಯುತ್ ತಂತಿ

By

Published : Mar 15, 2019, 8:29 AM IST

ಬೀದರ್ : ಬೀದರ್​ ಜಿಲ್ಲೆಯಲ್ಲಿ ಈಟಿವಿ ಭಾರತ್​ ವರದಿ ಅಧಿಕಾರಿಗಳ ಕಣ್ಣು ತೆರೆಸಿದೆ. ಇದರಿಂದಹಲವು ವರ್ಷಗಳಿಂದ ಆತಂಕದಲ್ಲಿದ್ದ ರೈತರು ನಿರಾಳರಾಗಿದ್ದಾರೆ.

ಹಲವಾರು ದಿನಗಳಿಂದ ರೈತರ ಜಮೀನಿನಲ್ಲಿ ಜೋತುಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಜೆಸ್ಕಾಂ ಅಧಿಕಾರಿಗಳು ಕೊನೆಗೂ ಸರಿಪಡಿಸಿದ್ದಾರೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಮಾಳೆಗಾಂವ್ ಗ್ರಾಮದ ರೈತರ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದವು. ಇದರಿಂದಾಗಿ ರೈತರು ಗದ್ದೆಯಲ್ಲಿ ಕೆಲಸ ಮಾಡದಂತಹ ದಃಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಜಾನುವಾರುಗಳು ಗದ್ದೆಯಲ್ಲಿ ಓಡಾಡುವುದೇ ದುಸ್ತರವಾಗಿತ್ತು.

ವಿದ್ಯುತ್ ತಂತಿ

ಈ ಕುರಿತು 'ಜೋತು ಬಿದ್ದು ಬಲಿಗಾಗಿ ಕಾದಿದೆ ಹೈಟೆನ್ಷನ್ ವಿದ್ಯುತ್ ತಂತಿ' ಎಂಬ ತಲೆ ಬರಹದ ಅಡಿಯಲ್ಲಿ 'ಈಟಿವಿ ಭಾರತ್​' ವಿಸ್ತೃತ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜೆಸ್ಕಾಂ ವಲಯಾಧಿಕಾರಿ ಚಂದ್ರಕಾಂತ್​ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಹೊಸ ಕಂಬಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ABOUT THE AUTHOR

...view details