ಬೀದರ್:ಜೆಸ್ಕಾಂ ಹಾಗೂ ಅರಣ್ಯ ಇಲಾಖೆಗಳ ನಡುವಿನ ಸಂವಹನ ಕೊರತೆಯಿಂದ ನಗರದಲ್ಲಿ ನೂರಾರು ಮರಗಳನ್ನು ಧರೆಗೆ ಉರುಳಿಸಿದ್ದು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಸ್ಕಾಂನಿಂದ ಮರಗಳ ಮಾರಣಹೋಮ: ಪರಿಸರ ಪ್ರೇಮಿಗಳ ಆಕ್ರೋಶ - ಜೇಸ್ಕಾಂ ವಿರುದ್ದ ಪರಿಸರ ಪ್ರೇಮಿಗಳ ಆಕ್ರೋಶ
ವಿದ್ಯುತ್ ತಂತಿಗೆ ಮರಗಳು ಅಡ್ಡಲಾಗಿವೆ ಎಂಬ ನೆಪವೊಡ್ಡಿ ಬೀದರ್ ನಗರದ ಬಹುತೇಕ ಭಾಗದಲ್ಲಿ ಹಲವು ಮರಗಳನ್ನು ಕತ್ತರಿಸಲಾಗಿದ್ದು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ತಂತಿಗೆ ಮರಗಳು ಅಡ್ಡಲಾಗಿವೆ ಎಂಬ ನೆಪವೊಡ್ಡಿ ನಗರದ ಬಹುತೇಕ ಭಾಗದಲ್ಲಿ ಹಲವು ಮರಗಳನ್ನು ಕತ್ತರಿಸಲಾಗಿದೆ. ಬೆಳೆದು ನಿಂತ ನೂರಾರು ಮರಗಳನ್ನು ಯಂತ್ರದಿಂದ ಬೇಕಾಬಿಟ್ಟಿಯಾಗಿ ಕತ್ತರಿಸುತ್ತಿರುವುದನ್ನು ಕಂಡು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ರಸ್ತೆಯ ಎರಡೂ ಬದಿ, ಗೋಮಾಳ, ಬಡಾವಣೆಗಳ ಪಾರ್ಕ್, ಖಾಲಿ ಇದ್ದ ಜಾಗದಲ್ಲಿನ ಮರಗಳನ್ನು ನೆಡುವ ಕೆಲಸ ಮಾಡ್ತಿದೆ. ಆದ್ರೆ ಜೇಸ್ಕಾಂ ಇಲಾಖೆ ಪ್ರತೀ ವರ್ಷ ವಿದ್ಯುತ್ ತಂತಿಯ ನೆಪವೊಡ್ಡಿ ಮರಗಳನ್ನು ಕತ್ತರಿಸಿ ಮಧ್ಯವರ್ತಿಗಳ ಜೇಬು ತುಂಬುವ ಕೆಲಸ ಮಾಡ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಗರ ಪ್ರದೇಶದಲ್ಲಿ ಫೈಬರ್ ಕೇಬಲ್ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.