ಕರ್ನಾಟಕ

karnataka

ETV Bharat / state

ಬಿಜೆಪಿಯ ಅರ್ಥವಿಲ್ಲದ ಟೀಕೆಗೆ ಸುಮ್ಮನಿರುವುದೇ ಉತ್ತಮ: ಸಿಎಂ ಟಾಂಗ್ - undefined

ಗ್ರಾಮ ವಾಸ್ತವ್ಯದ ಬಗ್ಗೆ ಟೀಕಿಸುತ್ತಿರುವ ನಾಯಕರಿಗೆ ಸಿಎಂ ಕುಮಾರಸ್ವಾಮಿ ಅವರು ಅರ್ಥವಿಲ್ಲದ ಟೀಕೆಗೆ ಮೌನವಾಗಿರುವುದೇ ಉತ್ತಮ ಎನ್ನುವ ಮೂಲಕ ಟಾಂಗ್​ ನೀಡಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ

By

Published : Jun 28, 2019, 10:36 AM IST

Updated : Jun 28, 2019, 11:14 AM IST

ಬೀದರ್​:ಗ್ರಾಮ ವಾಸ್ತವ್ಯ ಕುರಿತು ಬಿಜೆಪಿ ನಾಯಕರು ನಡೆಸುತ್ತಿರುವ ಟೀಕಾ ಪ್ರಹಾರಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುವೆಂಪು ರಚಿತ ಅರ್ಥವಿಲ್ಲದ ಟೀಕೆಗೆ ಮೌನವಾಗಿರುವುದೇ ಉತ್ತಮ ಎಂಬ ನುಡಿ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಗ್ರಾಮವಾಸ್ತವ್ಯ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಬೆಳಗ್ಗೆ ಉಜಳಂಬ ಗ್ರಾಮದಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದ ಬಗ್ಗೆ, ಜೆಡಿಎಸ್ ಕ್ಷೇತ್ರಗಳಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಮಾಡ್ತಾರೆ ಎನ್ನುತ್ತಿದ್ದಾರೆ. ನನ್ನ ವೈಯಕ್ತಿಕ ಪ್ರವಾಸದ ಬಗೆಗಿನ ಟೀಕೆಗಳಿಗೆ ಮೌನವಾಗಿರುವುದೇ ಉತ್ತಮ ಎಂದರು. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಶಾಲೆಯ ಗೋಡೆ ಮೇಲೆ ರಾಷ್ಟ್ರಕವಿ ಕುವೆಂಪು ಅವರ ನುಡಿ ಬರೆದಿರುವುದನ್ನ ಪ್ರಸ್ತಾಪಿಸಿ ಟೀಕಾಕಾರರಿಗೆ ಸಿಎಂ ಟಾಂಗ್​ ನೀಡಿದ್ರು.

ಇನ್ನು ಅಮೆರಿಕ ಪ್ರವಾಸ ಸರ್ಕಾರಿ ಕಾರ್ಯಕ್ರಮವಲ್ಲ. ಸ್ವಂತ ಖರ್ಚಿನಲ್ಲಿ ಹೊಗ್ತಾ ಇದ್ದೀನಿ. ಸಮಾಜದ ಗುರುಗಳು ದೇವಸ್ಥಾನದ ಭೂಮಿ ಪೂಜೆಯನ್ನು ನಾನೇ ಮಾಡಬೇಕೆಂದು ಹೆಚ್ಚು ಒತ್ತಡ ಹೇರಿರುವುದರಿಂದ ಹೊಗುತ್ತಿದ್ದೇನೆ ಎಂದರು.

ಒಂದೇ ರಾತ್ರಿ ಎಲ್ಲಾ ಬದಲಾವಣೆ ತರಲು ಸಾಧ್ಯವಾ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ಅವರು, ಗ್ರಾಮ ವಾಸ್ತವ್ಯದ ಜತೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳಿಂದ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಗ್ರಾಮ ವಾಸ್ತವ್ಯಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್, ಕ್ರೀಡಾ ಸಚಿವ ರಹಿಂಖಾನ್, ಶಾಸಕ ಬಿ.ನಾರಾಯಣರಾವ್ ಸಾಥ್ ನೀಡಿದರು.

ಇಂದು ಬೆಳಗ್ಗೆ ಉಜಳಂಬ ಗ್ರಾಮ ವಾಸ್ತವ್ಯ ಮುಗಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇರವಾಗಿ ಬೀದರ್ ವಿಮಾನ ತರಬೇತಿ ಕೇಂದ್ರದ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು.

ಯಶಸ್ವಿಯಾಯ್ತು ಗ್ರಾಮ ವಾಸ್ತವ್ಯ: ಸಿಎಂ ಹೆಚ್.ಡಿ ಕುಮಾರಸ್ವಾಮಿ ಉಜಳಂಬ ಗ್ರಾಮದಲ್ಲಿ ನಡೆಸಿದ ವಾಸ್ತವ್ಯ ಯಶಸ್ವಿಯಾಗಿದ್ದು, ಬಸವಕಲ್ಯಾಣ ಭಾಗದ ಗ್ರಾಮಗಳಲ್ಲಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ‌. ಅಲ್ಲದೆ ಸುಮಾರು 4 ಸಾವಿರಕ್ಕೂ ಅಧಿಕ ಜನರ ದೂರುಗಳು ಜನತಾ ದರ್ಶನದಲ್ಲಿ ಸಿಎಂ ಎದುರು ಬಂದಿವೆ. ದಶಕಗಳಿಂದ ದಿಕ್ಕು ಕಾಣದ ಊರಲ್ಲಿ ಸರ್ಕಾರದ ವಾಸ್ತವ್ಯದಿಂದ ಹಣೆ ಬರಹವೇ ಬದಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ.

Last Updated : Jun 28, 2019, 11:14 AM IST

For All Latest Updates

TAGGED:

ABOUT THE AUTHOR

...view details