ಕರ್ನಾಟಕ

karnataka

ETV Bharat / state

ಬಿಜೆಪಿಯ ಮತಗಳ ಧ್ರುವೀಕರಣದ ಲೆಕ್ಕಾಚಾರ ದೆಹಲಿಯಲ್ಲಿ ನಡೆಯಲಿಲ್ಲ: ಈಶ್ವರ ಖಂಡ್ರೆ - ಆಮ್​ ಆದ್ಮಿ ಪಕ್ಷ

ಬಿಜೆಪಿಯ ಮತಗಳ ಧ್ರುವೀಕರಣದ ಲೆಕ್ಕಾಚಾರ ದೆಹಲಿಯಲ್ಲಿ ನಡೆಯಲಿಲ್ಲ. ಜನ​ ಆಮ್​ ಆದ್ಮಿ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

Ishwar Khandre
ಮತಗಳ ಧ್ರುವೀಕರಣದ ಬಿಜೆಪಿ ಲೆಕ್ಕಾಚಾರ ದೆಹಲಿಯಲ್ಲಿ ನಡೆಯಲಿಲ್ಲ: ಈಶ್ವರ ಖಂಡ್ರೆ

By

Published : Feb 12, 2020, 3:00 AM IST

ಬೀದರ್:ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಮತಗಳ ಧ್ರುವೀಕರಣ ಲೆಕ್ಕಾಚಾರ ದೆಹಲಿಯಲ್ಲಿ ನಡೆಯಲಿಲ್ಲ. ಜನ ಅಭಿವೃದ್ಧಿ ಪರ ಮತ ಚಲಾಯಿಸುವ ಮೂಲಕ ಆಮ್​ ಆದ್ಮಿ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಮತಗಳ ಧ್ರುವೀಕರಣದ ಬಿಜೆಪಿ ಲೆಕ್ಕಾಚಾರ ದೆಹಲಿಯಲ್ಲಿ ನಡೆಯಲಿಲ್ಲ: ಈಶ್ವರ ಖಂಡ್ರೆ

ದೆಹಲಿ‌ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆ ಕೂಡ ಇದೆ. ಹೀಗಾಗಿ ಕೋಮುವಾದಿ ಬಿಜೆಪಿಯನ್ನು ಸೊಲಿಸಿ ನೆಲಕ್ಕಚಿಸಿದೆ ಇದು ಬಿಜೆಪಿಯವರಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲಾಗ್ತಿದೆ. ಶಿಲಾ ದಿಕ್ಷಿತ್ ಅವರ ಅವಧಿಯಲ್ಲಿ ಅಭಿವೃದ್ಧಿಯಾಗಿದೆ. ಅಲ್ಲಿನ ಜನರಿಗೆ ಕೇಜ್ರಿವಾಲ್ ಪರ್ಯಾಯ ನಾಯಕರಾಗಿದಕ್ಕೆ ಫಲಿತಾಂಶ ಹೀಗೆ ಬಂದಿದ್ದು, ಇದರಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದರು.

ABOUT THE AUTHOR

...view details