ಕರ್ನಾಟಕ

karnataka

ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಈಶ್ವರ್​ ಖಂಡ್ರೆ ಚಾಲನೆ... ಗಡಿ ದಾಟುವವರಿಗೆ ಎಚ್ಚರಿಕೆ

By

Published : Apr 16, 2020, 5:53 PM IST

ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ.

Ishwar Khandre inauguration drug spray in Bhalki town
ಭಾಲ್ಕಿ ಪಟ್ಟಣದಲ್ಲಿ ಔಷಧಿ ಸಿಂಪಡಣೆಗೆ ಈಶ್ವರ ಖಂಡ್ರೆ ಚಾಲನೆ

ಬೀದರ್:ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಚಾಲನೆ ನೀಡಿದರು.

ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಈಶ್ವರ್​ ಖಂಡ್ರೆ ಚಾಲನೆ
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಕಲಾದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಖುದ್ದು ಈಶ್ವರ್​ ಖಂಡ್ರೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಪಟ್ಟಣದ ಪ್ರತಿಯೊಂದು ಬಡಾವಣೆ ಸೇರಿದಂತೆ ಜನರು ಸೇರುವಂತಹ ಸ್ಥಳಗಳಲ್ಲಿ ಸೂಕ್ಷ್ಮವಾಗಿ ಔಷಧ ಸಿಂಪಡಣೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೇ ಮಹಾರಾಷ್ಟ್ರ ಗಡಿಯಲ್ಲಿರುವ ಅಟ್ಟರಗಾ ಚೆಕ್ ಪೋಸ್ಟ್​ಗೆ ದಿಢೀರ್​ ಭೇಟಿ ನೀಡಿ ನೆರೆ ರಾಜ್ಯದಿಂದ ಯಾರೇ ಬಂದಿದ್ದರೂ ಕೂಡ ರಾಜ್ಯಕ್ಕೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಲಾಕ್​ಡೌನ್ ಇನ್ನಷ್ಟು ಕಠಿಣವಾಗಲಿದ್ದು, ಮೇ 3ರವರೆಗೆ ಸಾರ್ವಜನಿಕರು ಸುರಕ್ಷಿತವಾಗಿ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ರಸ್ತೆಗೆ ಬಂದ್ರೆ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details