ಕರ್ನಾಟಕ

karnataka

ETV Bharat / state

ಸಂಸದ ಖೂಬಾ ವಿರುದ್ಧ ಈಶ್ವರ ಖಂಡ್ರೆ ಗರಂ: ಬಹಿರಂಗ ಚರ್ಚೆಗೆ ಆಹ್ವಾನ...! - ಬಹಿರಂಗ ಚರ್ಚೆಗೆ ಈಶ್ವರ ಖಂಡ್ರೆ ಆಹ್ವಾನ

ಸಂಸದ ಭಗವಂತ ಖೂಬಾ ಹಿರಿಯರಾದ ನಮ್ಮ ತಂದೆ ಭೀಮಣ್ಣ ಖಂಡ್ರೆ ಸೇರಿದಂತೆ ಖಂಡ್ರೆ ಪರಿವಾರದ ತೇಜೋವಧೆ ಮಾಡುವ ರಾಜಕೀಯ ಮಾಡ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೊಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ತರುವ ಕೆಲಸ ಮಾಡೋದು ಬಿಟ್ಟು, ರಾಜಕಾರಣ ಮಾಡ್ತಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.

Ishwar Khandre
ಈಶ್ವರ ಖಂಡ್ರೆ

By

Published : Oct 24, 2020, 5:38 PM IST

ಬೀದರ್:ಜಿಲ್ಲೆಯ ಅಭಿವೃದ್ಧಿಗೆ ಖಂಡ್ರೆ ಪರಿವಾರದ ಕೊಡುಗೆ ಏನಿದೆ ಎಂದು ಸಾರ್ವಜನಿಕವಾಗಿ ಆರೋಪ ಮಾಡುತ್ತಿರುವ ಸಂಸದ ಭಗವಂತ ಖೂಬಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

ನಗರದ ಅಕ್ಕ ಮಹಾದೇವಿ ಕಾಲೇಜಿನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಹೆಸರು ಹೇಳಿಕೊಂಡು ಮಾಜಿ ಸಚಿವರು ಭೀಮಣ್ಣ ಖಂಡ್ರೆ ರಾಜಕೀಯ ಮಾಡ್ತಿದ್ದಾರೆ. ಅನುಭವ ಮಂಟಪಕ್ಕೆ ಖಂಡ್ರೆ ಕೊಡುಗೆ ಏನು ಎಂದು ಹೇಳಿದ್ದಾರೆ. ಈ ವಿಚಾರ ಅಲ್ಲದೇ ಭಾಲ್ಕಿ ತಾಲೂಕಿನಲ್ಲಿ ಮನೆ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ಸತತ ಆರೋಪ ಮಾಡ್ತಿರುವುದರ ಕುರಿತು ನವೆಂಬರ್ 5ರಂದು ಬೀದರ್ ನಗರದ ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆಗೆ ಸ್ಥಳ ನಿಗದಿ ಮಾಡಲಾಗಿದ್ದು ಸಾರ್ವಜನಿಕ ಚರ್ಚೆಗೆ ಭಗವಂತ ಖೂಬಾ ಬರಬೇಕು ಎಂದು ಪಂಥಾಹ್ವಾನ ಕೊಟ್ಟರು.

ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ

ಸಂಸದ ಭಗವಂತ ಖೂಬಾ ಅವರು ಹಿರಿಯರಾದ ನಮ್ಮ ತಂದೆ ಭೀಮಣ್ಣ ಖಂಡ್ರೆ ಸೇರಿದಂತೆ ಖಂಡ್ರೆ ಪರಿವಾರದ ತೇಜೋವಧೆ ಮಾಡುವ ರಾಜಕೀಯ ಮಾಡ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೊಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ತರುವ ಕೆಲಸ ಮಾಡೋದು ಬಿಟ್ಟು, ಬಿಟ್ಟಿ ರಾಜಕಾರಣ ಮಾಡ್ತಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.

ABOUT THE AUTHOR

...view details