ಕರ್ನಾಟಕ

karnataka

ETV Bharat / state

ಶಾಲಾ ನಾಟಕದಲ್ಲಿ ಮೋದಿಗೆ ಅವಮಾನ: ಇಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ - ಶಾಲಾ ನಾಟಕದಲ್ಲಿ ಮೋದಿಗೆ ಅವಮಾನ ಪ್ರಕರಣ

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿಷಯದ ಮೇಲೆ ಮಾಡಿದ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಮಾನಕರ ಘಟನೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಶಾಲಾ ಶಿಕ್ಷಕಿ ಹಾಗೂ ಪಾತ್ರ ಮಾಡಿದ ಬಾಲಕಿ ತಾಯಿಯ ಜಾಮಿನು ಅರ್ಜಿ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು ಮಧ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದಾರೆ.

insult-to-modi-in-school-drama-bail-application-hearing-of-accused-today
ಶಾಹೀನ್ ಕಾಲೇಜು ನಾಟಕ ಪ್ರಕರಣ, ಶಿಕ್ಷಕಿ ಮತ್ತು ಬಾಲಕಿ ತಾಯಿ ಜಾಮಿನು ಅರ್ಜಿ ವಿಚಾರಣೆ

By

Published : Feb 11, 2020, 5:19 PM IST

ಬೀದರ್: ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿಷಯದ ಮೇಲೆ ಮಾಡಿದ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಶಾಲಾ ಶಿಕ್ಷಕಿ ಹಾಗೂ ಪಾತ್ರ ಮಾಡಿದ ಬಾಲಕಿ ತಾಯಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಶಾಹೀನ್ ಕಾಲೇಜು ನಾಟಕ ಪ್ರಕರಣ, ಶಿಕ್ಷಕಿ ಮತ್ತು ಬಾಲಕಿ ತಾಯಿ ಜಾಮೀನು ಅರ್ಜಿ ವಿಚಾರಣೆ!

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು ಮಧ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ನೀತಿಭ್ರಷ್ಟತೆ ಅಥವಾ ತಪ್ಪು ದಾರಿಗೆ ಎಳೆಯುವಿಕೆ ಆರೋಪದಡಿ ನಾಟಕ ಪ್ರದರ್ಶನ ಮಾಡಿದ ವಿಧ್ಯಾರ್ಥಿನಿಯ ತಾಯಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ABOUT THE AUTHOR

...view details