ಕರ್ನಾಟಕ

karnataka

ETV Bharat / state

ಹುಚ್ಚು ನಾಯಿ ಕಡಿತ: ಬಸವಕಲ್ಯಾಣದಲ್ಲಿ ಬಾಲಕನಿಗೆ ಗಂಭೀರ ಗಾಯ - ಬೀದರ್​ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಿರ್ಜಾಪೂರ ಗ್ರಾಮ

ಮನೆ ಬಳಿ ಆಟವಾಡುತಿದ್ದ ಬಾಲಕನ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ಮಿರ್ಜಾಪೂರ ಗ್ರಾಮದಲ್ಲಿ ನಡೆದಿದೆ.

sddd
ಬಸವಕಲ್ಯಾಣದಲ್ಲಿ ಬಾಲಕನಿಗೆ ಗಂಭೀರ ಗಾಯ

By

Published : Apr 22, 2020, 10:39 AM IST

ಬಸವಕಲ್ಯಾಣ: ಮನೆ ಬಳಿ ಆಟವಾಡುತಿದ್ದ ಬಾಲಕನ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ಮಿರ್ಜಾಪೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 5 ವರ್ಷದ ಸೋಹಮ ನಾಗನಾಥ ಕಾಂಬಳೆ ನಾಯಿ ಕಡಿತಕ್ಕೆ ಒಳಗಾದ ಬಾಲಕ. ರಸ್ತೆಯಲ್ಲಿ ಆಟವಾಡುವಾಗ ಬೀದಿ ನಾಯಿಯೊಂದು ಬಾಲಕ ಮೇಲೆ ದಿಢೀರನೆ ದಾಳಿ ನಡೆಸಿದ್ದು, ಬಾಲಕನ ತುಟಿಗಳಿಗೆ ಗಂಭೀರ ಗಾಯಗೊಳಿಸಿದೆ.

ಬಾಲಕನಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕಳುಹಿಸಲಾಗಿದೆ.

ABOUT THE AUTHOR

...view details