ಬೀದರ್: ನಶೆ ಏರಿಸುವ ಡ್ರಗ್ಸ್ ಸರಬರಾಜು ಮಾಡುವವರು ಹಾಗೂ ಕೊಂಡುಕೊಳ್ಳುವವರ ಮೇಲೆ ಕಠಿಣಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಡ್ರಗ್ಸ್ ಜಾಲ ಸಂಪೂರ್ಣ ತೊಡೆದು ಹಾಕಲು ಸರ್ಕಾರ ನಿರ್ಧಾರ : ಸಚಿವ ಜಗದೀಶ್ ಶೆಟ್ಟರ್ - Bidar News
ಡ್ರಗ್ಸ್ ಜಾಲವನ್ನು ಸಂಪೂರ್ಣ ತೊಡೆದು ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಗೃಹ ಸಚಿವರು ಈ ಕುರಿತು ಮಾಹಿತಿ ನೀಡಿದ್ದಾರೆ..
ಜಿಲ್ಲಾ ಪ್ರವಾಸದ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೊಂದೇ ಪ್ರಕರಣಗಳು ಬಯಲಾಗುತ್ತಿವೆ. ಡ್ರಗ್ಸ್ ಮಾಫಿಯಾ ಕುರಿತು ಕೆಲವರು ಮಾಹಿತಿ ನೀಡಿದ್ದಾರೆ. ಡ್ರಗ್ಸ್ ಜಾಲವನ್ನು ಸಂಪೂರ್ಣ ತೊಡೆದು ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಗೃಹ ಸಚಿವರು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದರು.
ಇನ್ನು, ಬೆಳಗಾವಿಯ ಪೀರನವಾಡಿ ರಾಯಣ್ಣ ಪ್ರತಿಮೆ ವಿವಾದ ಇಲ್ಲಿಗೆ ಬಿಟ್ಟು ಬಿಡೋಣ. ಗ್ರಾಮಸ್ಥರು ಸೇರಿದಂತೆ ಎಲ್ಲರೂ ಒಪ್ಪಿಕೊಂಡಂತೆ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಾಗಿದೆ. ಅದಕ್ಕೆ ಶಿವಾಜಿ ಸರ್ಕಲ್ ಎಂದು ಹೆಸರಿಸಲಾಗಿದೆ ಎಂದರು.