ಕರ್ನಾಟಕ

karnataka

ETV Bharat / state

ಭಾಲ್ಕಿಯಲ್ಲಿ ಹೆಚ್ಚಾದ ಮಂಗಗಳ ದಾಳಿ.. ಸ್ಥಳೀಯರಲ್ಲಿ ಆತಂಕ! - ಬೀದರ್​ ಸುದ್ದಿ

ಭಾಲ್ಕಿ ತಾಲೂಕಿನ ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, 2 ತಿಂಗಳ ಅವಧಿಯಲ್ಲಿ ಮಂಗಗಳು 8 ರಿಂದ 10 ಜನರಿಗೆ ಕಚ್ಚಿ ಗಾಯಗೊಳಿಸಿವೆ.

ಭಾಲ್ಕಿಯಲ್ಲಿ ಹೆಚ್ಚಾದ ಮಂಗಗಳ ದಾಳಿ: ಸ್ಥಳೀಯರಲ್ಲಿ ಆತಂಕ!

By

Published : Nov 17, 2019, 8:52 PM IST

ಬೀದರ್: ಭಾಲ್ಕಿ ತಾಲೂಕಿನ ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, 2 ತಿಂಗಳ ಅವಧಿಯಲ್ಲಿ ಮಂಗಗಳು 8 ರಿಂದ 10 ಜನರಿಗೆ ಕಚ್ಚಿ ಗಾಯಗೊಳಿಸಿವೆ.

ಭಾಲ್ಕಿಯಲ್ಲಿ ಹೆಚ್ಚಾದ ಮಂಗಗಳ ದಾಳಿ.. ಸ್ಥಳೀಯರಲ್ಲಿ ಆತಂಕ!

ಗ್ರಾಮದ ಮುಖ್ಯ ರಸ್ತೆ ಸೇರಿ ಅಲ್ಲಲ್ಲಿ ಕಾಣಿಸುವ ಮಂಗಗಳು ಜನರು ಕಾಣಿಸಿದ ಕೂಡಲೇ ದಿಢೀರನೆ ದಾಳಿ ಮಾಡುತ್ತಿವೆ. ಹೀಗಾಗಿ ವಾನರ ಸೈನ್ಯ ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತೋ ಎಂದು ಗ್ರಾಮದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಕ್ಕಳು,ವೃದ್ಧರನ್ನೇ ಗುರಿಯಾಗಿಸಿಕೊಂಡು ಮಂಗಗಳು ದಾಳಿ ನಡೆಸುತ್ತಿವೆ. ಸತತ ಎರಡು ತಿಂಗಳಿನಿಂದ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಮಂಗಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸಾಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details