ಬೀದರ್:ಕೊರೊನಾ ಅಟ್ಟಹಾಸ ಬೀದರ್ನಲ್ಲಿ ಮುಂದುವರೆದಿದ್ದು, ಮಹಾರಾಷ್ಟ್ರದಿಂದ ವಾಪಸಾದವರಲ್ಲಿ ಇಂದು ಒಂದೇ ದಿನ 48 ಜನರಲ್ಲಿ ಪಾಸಿಟಿವ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ.
ಬೀದರ್ಗೆ ಬಿಡದ 'ಮಹಾ' ಕಂಟಕ... ಇಂದು 48 ಕೊರೊನಾ ಕೇಸ್ ಪತ್ತೆ!
ಮಹಾ 'ಕಂಟಕ'ದಿಂದ ಇಂದು ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 270ಕ್ಕೆ ಎರಿಕೆಯಾಗಿದ್ದು, 97 ಜನ ಸೋಂಕಿತರು ಗುಣಮುಖರಾಗಿದ್ದಾರೆ. 6 ಸೋಂಕಿತರು ಮೃತಪಟ್ಟಿದ್ದಾರೆ.
ಬಸವಕಲ್ಯಾಣ ತಾಲೂಕಿನ ದೇವಿ ತಾಂಡ ಒಂದರಲ್ಲೇ ಮಹಾರಾಷ್ಟ್ರಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ ಒಟ್ಟು 17 ಜನರಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನ ಜಾನಾಪುರ್-01, ಹಿಪ್ಪರಗಾ ತಾಂಡ-05, ಹಿರನಾಗಾಂವ್-01, ಓತಗಿ-01, ಲಾಡವಂತಿ-01, ಶಿರೂರಿ-01, ಕೊಹಿನೂರ್-01 ಹಾಗೂ ತಮಗ್ಯಾಳ ಗ್ರಾಮದಲ್ಲಿ 02 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಮಲನಗರ ಪಟ್ಟಣದಲ್ಲಿ 05, ಚಿಟಗುಪ್ಪ-03, ಹುಮನಾಬಾದ್-07 ಹಾಗೂ ಭಾಲ್ಕಿ ತಾಲೂಕಿನ ಕೆರೂರ್ ಗ್ರಾಮದಲ್ಲಿ-02 ಮತ್ತು ಮಳಚಾಪುರ್ ಗ್ರಾಮದಲ್ಲಿ 01 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 270ಕ್ಕೆ ಎರಿಕೆಯಾಗಿದ್ದು, 97 ಜನ ಸೋಂಕಿತರು ಗುಣಮುಖರಾಗಿದ್ದಾರೆ. 6 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ 167 ಜನರ ಸೋಂಕಿತರು ಜಿಲ್ಲಾ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.