ಕರ್ನಾಟಕ

karnataka

ETV Bharat / state

ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ... ಆರೋಗ್ಯ ಇಲಾಖೆಯಿಂದ ದಾಳಿ - ದಂಡ ವಿಧಿಸಿ ನೊಟಿಸ್ ಜಾರಿ

ತಾಲೂಕು ಆರೋಗ್ಯ ಇಲಾಖೆ ಕಚೇರಿ ಅಧಿಕಾರಿಗಳ ತಂಡ ವಿವಿಧ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಯಿತು.

Illegal tobacco sales in Basavakalyna
ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು

By

Published : Jan 19, 2020, 4:39 AM IST

ಬಸವಕಲ್ಯಾಣ: ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಮಾಲೀಕರಿಗೆ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿದೆ.

ದಾಳಿ ನಡೆಸಿ ದಂಡ ವಿಧಿಸಿದ ಅಧಿಕಾರಿಗಳು

ತಾಲೂಕು ಆರೋಗ್ಯ ಇಲಾಖೆ ಕಚೇರಿ ಅಧಿಕಾರಿಗಳ ತಂಡದಿಂದ ಘೋಟಾಳ ಗ್ರಾಮದ ವಿವಿಧ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ನಿಯಮ ಉಲ್ಲಂಘಿಸಿದ ಮಾಲೀಕರಿಗೆ ಕೋಟ್ಪಾ ಕಾಯ್ದೆಯಡಿ 600 ರೂ. ದಂಡ ವಿಧಿಸಲಾಯಿತು.

ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕರಾದ ಲಕ್ಷ್ಮಣ ಜಮ್ಮು, ಶಿವರಾಜ ತಡೋಳಗೆ, ರಾಮಲಿಂಗ ದಾಳಿಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details