ಬಸವಕಲ್ಯಾಣ:ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗಲು ಸಾಗುತ್ತಿದ್ದ ಲಾರಿ ಸಹಿತ 10.50 ಲಕ್ಷ ರೂ. ಮೌಲ್ಯದ 350 ಕ್ವಿಂಟಾಲ್ (35ಟನ್) ಅಕ್ಕಿಯನ್ನು ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯೆಡೆಗೆ ...ಕೊನೆಗೂ ಜಪ್ತಿಯಾಯ್ತು 35 ಟನ್...! - ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ
ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗಲು ಸಾಗುತ್ತಿದ್ದ ಲಾರಿ ಸಹಿತ 10.50 ಲಕ್ಷ ರೂ. ಮೌಲ್ಯದ 350 ಕ್ವಿಂಟಾಲ್ (35ಟನ್) ಅಕ್ಕಿಯನ್ನು ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
![ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯೆಡೆಗೆ ...ಕೊನೆಗೂ ಜಪ್ತಿಯಾಯ್ತು 35 ಟನ್...! illegal-rice-seized-in-basavakalyana-by-food-inspectors](https://etvbharatimages.akamaized.net/etvbharat/prod-images/768-512-5585688-thumbnail-3x2-sanju.jpeg)
ಹೈದ್ರಾಬಾದ್ ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ-65 ರ ಹುಮನಾಬಾದ್ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವಾಗ ಇಲ್ಲಿಯ ತಡೋಳಾ ಸಮಿಪ ಧಾಮಿ ಢಾಬಾದ ಬಳಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಅಕ್ಕಿ ತುಂಬಿದ ಲಾರಿ ಸಹಿತ 35 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಆಹಾರ ಇಲಾಖೆ ಆಹಾರ ನಿರೀಕ್ಷಕರಾದ ರವಿ ಸೂರ್ಯವಂಶಿ ಹಾಗೂ ರಾಮರತನ ದೇಗಲೆ ನೇತೃತ್ವದ ತಂಡ ದಾಳಿ ನಡೆಸಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಬೀದರ್‌ನಿಂದ ಗುಜರಾತ್ ರಾಜ್ಯಕ್ಕೆ ಅಕ್ಕಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.