ಬೀದರ್: ಲಾಕ್ ಡೌನ್ ಮಾಡಬೇಕು ಅನ್ನೊದಾದ್ರೆ ರಾಜ್ಯದ 1 ಕೋಟಿ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂ. ಜಮಾ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಲಾಕ್ಡೌನ್ ಮಾಡುವುದಾದರೆ 1 ಕೋಟಿ ಕುಟುಂಬಗಳಿಗೆ ತಲಾ ಹತ್ತು ಸಾವಿರ ನೀಡಿ : ಸಿದ್ದರಾಮಯ್ಯ - ಲಾಕ್ಡೌನ್ ಕುರಿತು ಸಿದ್ದರಾಮಯ್ಯ ಹೇಳಿಕೆ
ರಾಜ್ಯದಲ್ಲಿ ಮತ್ತೇ ಲಾಕ್ ಡೌನ್ ಮಾಡಬೇಕು ಅನ್ನೊದಾದ್ರೆ ರಾಜ್ಯದ 1 ಕೋಟಿ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂ. ಜಮಾ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಸಿದ್ದರಾಮಯ್ಯ
ಲಾಕ್ಡೌನ್ ಕುರಿತು ಸಿದ್ದರಾಮಯ್ಯ ಹೇಳಿಕೆ
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಉಪ ಚುನಾವಣೆ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್ ಡೌನ್ ಮಾಡಬೇಕು ಅನ್ನೋದಾದ್ರೆ ರಾಜ್ಯದ 1 ಕೋಟಿ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂ. ಜಮಾ ಮಾಡಲಿ ಎಂದರು.
ಲಾಕ್ಡೌನ್ನಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಾರ್ಖಾನೆಗಳು ಬಂದ್ ಆಗ್ತವೆ. ಇದು ಸರಿಯಾದ ಕ್ರಮವಲ್ಲ. ಬೇಕಿದ್ರೆ ಬೀಗಿ ಕ್ರಮಗಳನ್ನ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಅಲ್ಲದೇ, ಕೊರೊನಾ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ಸರ್ವ ಪಕ್ಷಗಳ ಸಭೆ ಕರೆದ್ರೆ ಸಲಹೆ ನೀಡಲು ಹೊಗುವುದಾಗಿ ತಿಳಿಸಿದರು.
Last Updated : Apr 12, 2021, 7:06 PM IST