ಬೀದರ್: ಸಚಿವ ಸ್ಥಾನದ ಜವಾಬ್ದಾರಿ ಕೊಟ್ರೆ ನಿಭಾಯಿಸುವೆ. ಮೂರು ಬಾರಿ ಶಾಸಕನಾಗಿರುವ ನನಗೆ ಪಕ್ಷದ ಹೈಕಮಾಂಡ್ ಅನ್ಯಾಯ ಮಾಡುವುದಿಲ್ಲ ಎಂಬ ಬಲವಾದ ವಿಶ್ವಾಸವಿದೆ ಎಂದು ಔರಾದ್ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಹೇಳಿದ್ದಾರೆ.
ಬೊಂತಿ ತಾಂಡ ನಿವಾಸದಲ್ಲಿ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಸಂಪುಟ ರಚನೆಯಾಗಲಿದೆ. ಅದರಲ್ಲಿ ನನಗೆ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ. ಮೂರು ಬಾರಿ ಶಾಸಕನಾಗಿ ಬೀದರ್ ಜಿಲ್ಲೆಯಿಂದ ಆಯ್ಕೆಯಾಗಿದ್ದೇನೆ. ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರ್ವ ಆರಂಭವಾಗಲಿದೆ.
ಮಂತ್ರಿ ಸ್ಥಾನ ಕೊಟ್ರೆ ನಿಭಾಯಿಸುವೆ- ಪ್ರಭು ಚವ್ಹಾಣ ನನಗೆ ಪಕ್ಷ ನನ್ನ ತಾಯಿ ಇದ್ದಂಗೆ. ಹೈಕಮಾಂಡ್ಗೆ ನನ್ನ ಬಗ್ಗೆ ಎಲ್ಲವೂ ಗೊತ್ತಿದೆ. ಸಿಎಂ ಬಿಎಸ್ವೈ ಅವರಿಗೆ ಎಲ್ಲಾ ಗೊತ್ತಿದೆ. ಹೀಗಿರುವಾಗ ಜಿಲ್ಲೆಯ ಏಕೈಕ ಶಾಸಕನಾಗಿರುವ ನನಗೆ ಪಕ್ಷ ಜಿಲ್ಲಾವಾರು ಪ್ರಾತಿನಿಧ್ಯ ಕೊಟ್ಟಲ್ಲಿ ಸಚಿವ ಸ್ಥಾನ ಸಿಗೋದು ಗ್ಯಾರಂಟಿ. ಆದರೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೆನೆ ಎಂದು ಪ್ರಭು ಚೌವ್ಹಾಣ ಹೇಳಿದರು.
ಈಗಾಗಲೇ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದೆ. ಹಿಂದು ಯುವಕರ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆದಿದೆ. ರೈತರಿಗೆ ಪ್ರೋತ್ಸಾಹ ನೀಡಲುವ ಸಲುವಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 4,000 ರೂ. ಹೆಚ್ಚಳ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.