ಬೀದರ್ :ಪತಿ-ಪತ್ನಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಸಂಜುಕುಮಾರ್ ಗುಂಡಪ್ಪ ಬರ್ಗೆ (42) ಹಾಗೂ ಸವಿತಾ ಸಂಜುಕುಮಾರ್ (37) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಾಲ ಬಾಧೆ ತಾಳಲಾರದೆ ಈ ದಂಪತಿ ಸಾವಿಗೆ ಶರಣಾಗಿದ್ದಾರೆ.
ಮನೆ ಕಟ್ಟಲೆಂದು ಸಂಜುಕುಮಾರ್ ದಂಪತಿ ಖಾಸಗಿ ಸಾಲ ಪಡೆದಿದ್ದರು. ಆದರೆ, ಈ ಸಾಲಬಾಧೆಯನ್ನು ತಾಳಲಾರದೆ ಇಬ್ಬರೂ ವಿಷ ಸೇವಿಸಿದ್ದರು. ತಕ್ಷಣವೇ ವಿಷಯ ತಿಳಿದು ಸಂಬಂಧಿಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.