ಬಸವಕಲ್ಯಾಣ: ಮನೆ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಕಳ್ಳರನ್ನು ಬಂಧಿಸಿದ ಪೊಲೀಸರು ಅವರಿಂದ 10 ಗ್ರಾಂ ಚಿನ್ನಾಭರಣ, 37,300 ರೂ. ನಗದು ಹಣ ವಶಪಡಿಸಿಕೊಂಡ ಘಟನೆ ನಡೆದಿದೆ.
ಮನೆ ಕಳ್ಳತನ: ಪೊಲೀಸರಿಂದ ಮೂವರ ಬಂಧನ - ಬಸವಕಲ್ಯಾಣ ಕ್ರೈಂ ನ್ಯೂಸ್
ಬಸವಕಲ್ಯಾಣದಲ್ಲಿ ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಅಮೀನ ಸಾಯಬ್ ಅಲಿ ಶೇಕ್(22), ಪೈಜುಲ್ ಮತಾಬ್‌ಸಾಬ್(28) ಹಾಗೂ ಈತನ ಕಿರಿಯ ಸಹೋದರ ತಾಜೋದ್ದಿನ್(25) ಬಂಧಿತ ಆರೋಪಿಗಳು. ತಾಮ್ರದ ಮೂರ್ತಿ ತಯಾರಿಸುವ ವೃತ್ತಿಯಲಿದ್ದ ಆರೋಪಿಗಳು, ಕಳೆದ 6 ರಂದು ನಗರದ ಭೀಮನಗರ ಬಳಿಯ ಮನೆಯೊಂದರಲ್ಲಿ ರಾತ್ರಿ ಕಳವು ಮಾಡಿ ತಲೆ ಮರೆಸಿಕೊಂಡಿದ್ದರು. ಬುಧವಾರ ಆರೋಪಿಗಳು ಹುಲಸೂರು ಬಸ್ ನಿಲ್ದಾಣದಲ್ಲಿ ಇರುವುದನ್ನು ಮಾಹಿತಿ ಪಡೆದ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನು ಎಸ್ಪಿ ಡಿ.ಎಲ್, ನಾಗೇಶ ಡಿವೈಎಸ್ಪಿ ಮಹೇಶ್ವರಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಸ್, ನ್ಯಾಮಗೌಡರ್, ಪಿಎಸ್‌ಐ ಸುನೀಲಕುಮಾರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.