ಕರ್ನಾಟಕ

karnataka

ETV Bharat / state

ಹೋಟಲ್​​ನಲ್ಲಿ ಕಂಠಪೂರ್ತಿ ಉಂಡು, ಕಾಸು ದೋಚಿ ಪರಾರಿ... ಸಿಸಿಟಿವಿಯಲ್ಲಿ ಕಳ್ಳನ ಆಟ ಸೆರೆ

ಬೀದರ್​ ಜಿಲ್ಲೆ ಬಸವಕಲ್ಯಾಣದ ಅಂಬೇಡ್ಕರ್​ ವೃತ್ತದ ಬಳಿಯಿರುವ ನಂದಿನಿ ಹೋಟೆಲ್​ಗೆ ನುಗ್ಗಿದ ಕಳ್ಳನೊಬ್ಬ ಹಣ ಕಳ್ಳತನ ಮಾಡುವುದರ ಜೊತೆಗೆ ಅಂಗಡಿಯಲ್ಲಿ ಹೊಟ್ಟೆ ತುಂಬ ಊಟ ಮಾಡಿ ಹೋದ ಘಟನೆ ತಡರಾತ್ರಿ ನಡೆದಿದೆ.

Hotel thieves in bidar
ಕಳ್ಳನ ಆಟ ಸಿಸಿ ಟಿವಿಯಲ್ಲಿ ಸೆರೆ

By

Published : Sep 19, 2020, 11:55 PM IST

ಬಸವಕಲ್ಯಾಣ: ಹೋಟೆಲ್​ಗೆ ನುಗ್ಗಿದ ಕಳ್ಳನೊಬ್ಬ ಕೈಗೆ ಸಿಕ್ಕಷ್ಟು ಕಾಸು ದೋಚಿ, ಹೋಟೆಲ್​ನಲ್ಲಿಯೇ ಭರ್ಜರಿ ಊಟ ಮಾಡಿ ಹೋದ ಘಟನೆ ನಗರದ ಅಂಬೇಡ್ಕರ್ ವೃತ್ತದ ಸಮೀಪವಿರುವ ನಂದಿನಿ ಹೊಟೇಲ್(ರೆಸ್ಟೋರೆಂಟ್)ನಲ್ಲಿ ತಡರಾತ್ರಿ ನಡೆದಿದೆ.

ಕಳ್ಳನ ಆಟ ಸಿಸಿ ಟಿವಿಯಲ್ಲಿ ಸೆರೆ

ಈ ಹೋಟೆಲ್​ನ ಹಿಂಭಾಗದ ಕಿಟಕಿ ಮೂಲಕ ಒಳ ನುಗ್ಗಿದ ಖದೀಮ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 3 ಸಾವಿರ ರೂಪಾಯಿ ಜೇಬಿಗೆ ಏರಿಸಿದ್ದಾನೆ. ನಂತರ ಅಲ್ಲಿಯೇ ಸಿದ್ಧಪಡಿಸಿದ್ದ ಅಡುಗೆಯ ರುಚಿಯನ್ನು ಸವಿದಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕರು ಮಹಡಿ ಮೇಲೆ ಮಲಗಿದ್ದರು ಎನ್ನಲಾಗುತ್ತಿದೆ. ಬೆಳಗ್ಗೆ ಹೋಟೆಲ್‌ ಬಾಗಿಲು ತೆರೆಯುತ್ತಿದ್ದಂತೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳ್ಳತನ ಮಾಡಿರುವ ಮೊತ್ತ ಕಡಿಮೆ ಇರುವ ಕಾರಣ ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details