ಬೀದರ್:ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕೊರೊನಾ ವಾರಿಯರ್ಸ್ಗಳು ಅವಿರತ ಶ್ರಮ ವಹಿಸುತ್ತಿದ್ದು, ಸಚಿವ ಪ್ರಭು ಚವ್ಹಾಣ್ ಶಾಲು ಹೊದಿಸಿ ಸನ್ಮಾನ ಮಾಡಿ ಕೃತಜ್ಞತೆ ಅರ್ಪಿಸಿದರು.
ಕೊರೊನಾ ವಾರಿಯರ್ಸ್ಗಳಿಗೆ ಸಚಿವ ಪ್ರಭು ಚವ್ಹಾಣ್ರಿಂದ ಸನ್ಮಾನ ಜಿಲ್ಲೆಯ ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸನ್ಮಾನ ನಡೆಯಿತು.
ಇದನ್ನೂ ಓದಿ:ಹಳ್ಳಿಗಳೇ ಇದೀಗ ಕೊರೊನಾ ಹಾಟ್ಸ್ಪಾಟ್... ಒಂದೇ ಊರಲ್ಲಿ 10 ದಿನದಲ್ಲಿ 11 ಸಾವು
ಈ ವೇಳೆ ಮಾತನಾಡಿದ ಸಚಿವ ಚವ್ಹಾಣ್, ಕಳೆದೆರಡು ವಾರಗಳಲ್ಲಿ ಜಿಲ್ಲೆಯಲ್ಲಿ ತಾಂಡವವಾಡ್ತಿದ್ದ ಕೊರೊನಾವನ್ನು ತಡೆಯುವಲ್ಲಿ ನಿರಂತರವಾಗಿ ಶ್ರಮಿಸಿದ ವಾರಿಯರ್ಸ್ಗಳ ಸೇವೆ ಸ್ಮರಣೀಯ. ಕೊರೊನಾ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಇನ್ನೂ ಶ್ರಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್ಗಳ ಜತೆಯಲ್ಲಿ ಸರ್ಕಾರ ಸದಾ ಇರಲಿದೆ ಎಂದರು.