ಕರ್ನಾಟಕ

karnataka

ETV Bharat / state

ಮಧ್ಯರಾತ್ರಿ ಮನೆಗೆ ನುಗ್ಗಿದ ಕಳ್ಳರು... 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿ..! - Robbry in badalgao village

ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ತಡರಾತ್ರಿ ದೇವಿದಾಸ ಪುಂಡಲಿಕರಾವ್ ಎಸಬಾ ಎಂಬಾತರ ಮನೆಯಲ್ಲಿ ಕಳ್ಳತನ. 22 ತೊಲ ಚಿನ್ನ, ನಗದು ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮನೆ ಕಳ್ಳತನ

By

Published : May 1, 2019, 3:02 AM IST

ಬೀದರ್: ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಆಗಂತುಕರ ತಂಡ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾದ ಘಟನೆ ನಡೆದಿದೆ.

ಮನೆ ಕಳ್ಳತನ

ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ತಡರಾತ್ರಿ ದೇವಿದಾಸ ಪುಂಡಲಿಕರಾವ್ ಎಸಬಾ ಎಂಬುವರ ಮನೆಗೆ ನುಗ್ಗಿದ ನಾಲ್ವರು, 22 ತೊಲ ಚಿನ್ನ, ನಗದು ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕದ್ದು ಪರಾರಿಯಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಔರಾದ್ ಪೊಲೀಸ್ ಠಾಣೆಯ ಪಿಎಸ್​ಐ ನಾನಾಗೌಡ ಪಾಟೀಲ್ ಸ್ಥಳ ಪರಿಶೀಲನೆ ನಡೆಸಿದ್ದು, ಶ್ವಾನ ದಳದಿಂದ ಆರೋಪಿಗಳ ಗುರುತಿಗಾಗಿ ಶೋಧ ನಡೆಸಿದರು. ವಿಷಯ ತಿಳಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ರೆಡ್ಡಿ, ಡಿವೈಎಸ್​ಪಿ ವೆಂಕನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details