ಬಸವಕಲ್ಯಾಣ: ನಾಡಿನಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬಸವಕಲ್ಯಾಣದಲ್ಲಿಯೂ ಕೂಡಾ ಸೌಹಾರ್ದತೆಯಿಂದ ಬಣ್ಣದ ಹಬ್ಬವನ್ನು ಆಚರಣೆ ಮಾಡಲಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಂಗಿನಾಟ ನಡೆಯಿತು. ನಗರದ ಮುಖ್ಯ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿಯೂ ಹಲವಡೆ ಹಬ್ಬದ ಉತ್ಸಾಹದೊಂದಿಗೆ ಯುವಕರು ಗುಂಪು ಗುಂಪಾಗಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ, ಕೆಲವಡೆ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟಕ್ಕೆ ರಂಗು ತಂದರು.