ಬೀದರ್: ನೆರೆಯ ರಾಜ್ಯ ತೆಲಂಗಾಣದಲ್ಲಿ ಶಂಕಿತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಬೀದರ್ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ತೆಲಂಗಾಣದಲ್ಲಿ ಹೆಚ್ಚಿದ ಶಂಕಿತ ಕೊರೊನಾ ಪ್ರಕರಣಗಳು: ಬೀದರ್ನಲ್ಲಿ ಹೈ ಅಲರ್ಟ್ - high alert in border district
ತೆಲಂಗಾಣದಲ್ಲಿ ಶಂಕಿತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದರ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಚೆಕ್ಪೋಸ್ಟ್ನಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಬೀದರ್ ಗಡಿ ಜಿಲ್ಲೆಯಾಗಿದ್ದು, ನೆರೆ ರಾಜ್ಯದಿಂದ ಬರುವ ಖಾಸಗಿ ವಾಹನಗಳನ್ನು ತಡೆಯಲಾಗುತ್ತಿದೆ. ಜಿಲ್ಲೆಯ ಸುತ್ತ ನಾಕಾಬಂದಿ ಹಾಕಲಾಗಿದೆ. ಜಿಲ್ಲೆಯನ್ನು ಹೈಅಲರ್ಟ್ನಲ್ಲಿ ಇರಿಸಲಾಗಿದೆ.
ಹೈದರಾಬಾದ್ ಮಾರ್ಗದ ಗಡಿಯಲ್ಲಿ ಚೆಕ್ಪೊಸ್ಟ್ ನಿರ್ಮಿಸುವ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಸುತ್ತಲೂ ನಾಕಾ ಬಂದಿ ಹಾಕುವ ಮೂಲಕ ಹೊರ ರಾಜ್ಯದಿಂದ ಬರುವ ಎಲ್ಲ ವಾಹನಗಳನ್ನ ತಪಾಸಣೆ ನಡೆಸಲಾಗುತ್ತಿದೆ.
ಸರ್ಕಾರಿ ವಾಹನಗಳನ್ನ ಹೊರತುಪಡೆಸಿ ಯಾವುದೇ ವಾಹನವನ್ನು ಜಿಲ್ಲೆಯ ಒಳಗೆ ಪ್ರವೇಶಿಸದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಹೈದರಾಬಾದ್ನಿಂದ ಕಾಲು ನಡಿಗೆಯಲ್ಲಿ ಬರುವ ಜನರನ್ನು ಚೆಕ್ಪೊಸ್ಟ್ ಸೇರಿದಂತೆ ಗಡಿ ಭಾಗದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.