ಬೀದರ್:ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಗಾಂಧಿಗಂಜ್ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದ ಬೇಳೆ ಕಾಳುಗಳು ನೀರು ಪಾಲಾಗಿದ್ದರೆ, ಬೀದರ್ ತಾಲೂಕಿನ ಯರನಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ.
ಬೀದರ್: ಮಳೆ ನೀರು ಮನೆಗೆ ನುಗ್ಗಿ ಅವಾಂತರ.. ಸಿಡಿಲಿಗೆ ಓರ್ವ ಬಲಿ - ಮನೆ ಕುಸಿತ
ಬೀದರ್ ಜಿಲ್ಲಾದ್ಯಂತ ನಿನ್ನೆಯಿಂದ ಮಳೆಯಾರ್ಭಟ ಜೋರಾಗಿದ್ದು, ಹಲವು ಕಡೆ ಹಾನಿಯಾಗಿದೆ. ಕುಶನೂರ್ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಳೆ ನೀರು ಮನೆಗೆ ನುಗ್ಗಿ ಅವಾಂತರ..ಸಿಡಿಲಿಗೆ ಓರ್ವ ಬಲಿ
ಔರಾದ್ ತಾಲೂಕಿನ ಗಡಿ ಕುಶನೂರ್ ಗ್ರಾಮದಲ್ಲಿ ಶಕುಂತಲಾ ಸೊರಳ್ಳಿ ಎಂಬಾತರ ಮನೆ ಜಲಾವೃತವಾಗಿ ದಿನ ಬಳಕೆ ವಸ್ತುಗಳು ನೀರು ಪಾಲಾಗಿವೆ. ಜಿಲ್ಲೆಯ ಭಾಲ್ಕಿ, ಕಮಲಾನಗರ, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ.
ಓದಿ:ವಾಯ್ಸ್ ಮೆಸೇಜ್ ಮಾಡಿ ಭದ್ರಾ ನಾಲೆಗೆ ಹಾರಿ ಇಡೀ ಕುಟುಂಬ ಆತ್ಯಹತ್ಯೆಗೆ ಯತ್ನ; ಇಬ್ಬರು ಕಣ್ಮರೆ