ಕರ್ನಾಟಕ

karnataka

ETV Bharat / state

ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ: ಹಲವೆಡೆ ರಸ್ತೆ ಸಂಚಾರ ಬಂದ್​​​​​​​​

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ್ ಗ್ರಾಮದ ಕೂಡು ರಸ್ತೆಯ ಸೇತುವೆ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣವಾಗಿ ಸ್ತಬ್ದವಾಗಿದೆ.

Home wall collapse
ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ: ಮನೆ ಗೋಡೆ ಕುಸಿತ

By

Published : Sep 15, 2020, 2:44 PM IST

ಬೀದರ್: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ಸಂಚಾರ ಬಂದ್ ಆಗಿದ್ದು, ಮನೆ ಗೋಡೆ ಕುಸಿದು ಅಪಾರ ಹಾನಿಯಾಗಿದೆ.

ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ: ರಸ್ತೆ ಸಂಚಾರ ಬಂದ್​​

ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಹುಮನಾಬಾದ್, ಕಮನಗರ ಹಾಗೂ ಭಾಲ್ಕಿ ತಾಲೂಕಿನಲ್ಲಿ ಅಪಾರ ನಷ್ಟ ಉಂಟುಮಾಡಿದೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ್ ಗ್ರಾಮದ ಕೂಡು ರಸ್ತೆಯ ಸೇತುವೆ ಮೇಲಿಂದ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣವಾಗಿ ಬಂದ್​ ಆಗಿದೆ. ಹುಡಗಿ ಗ್ರಾಮದ ಬಳಿಯ ಸೇತುವೆ ಮೇಲಿಂದ ನೀರು ಹರಿದು ಸಂಚಾರ ಕಡಿತವಾಗಿದೆ. ಅಲ್ಲದೇ ಹಂದಿಕೇರಾ ಗ್ರಾಮದ ದಾದಾರಾವ್ ಎಂಬುವರ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ‌.

ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ: ರಸ್ತೆ ಸಂಚಾರ ಬಂದ್

ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಸುರಿದ ಮಳೆಗೆ ರೈತರ ಗದ್ದೆಯಲ್ಲಿನ ಮಣ್ಣು ನೀರುಪಾಲಾಗಿವೆ. ಜಮೀನಿಗೆ ಮಳೆ ನೀರು ನುಗ್ಗಿದ ಪರಿಣಾಮ ಸೋಯಾಬಿನ್, ತೊಗರಿ ಬೆಳೆಗಳು ನಾಶವಾಗಿವೆ. ಕಮಲನಗರ ತಾಲೂಕಿನ ಭೋಪಾಳಗಡ ಕೆರೆ ಅಪಾಯದಂಚಿಗೆ ತುಂಬಿದ್ದು, ಹೊರ ಹರಿವು ಹೆಚ್ಚಾಗಿದೆ. ಸುತ್ತಲಿನ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಔರಾದ್ ತಾಲೂಕಿನ ಜಮಾಲಪೂರ ಕೆರೆ ತುಂಬಿದ್ದು, ಹೊರ ಹರಿವು ಸಮರ್ಪಕ ಆಗದೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಮಾಂಜ್ರಾ ನದಿಯಲ್ಲಿ 'ಮಹಾ'ನೀರು:ಜಿಲ್ಲೆಯ ಜೀವನದಿ ಮಾಂಜ್ರಾದಲ್ಲಿ ನದಿ ನೀರಿನ ಹರಿವು ಹೆಚ್ಚಾಗಿದೆ. ಮಳೆ ನೀರು ಸೇರಿದಂತೆ ಮಹಾರಾಷ್ಟ್ರದ ಕೊಯಿನಾ ಹಾಗೂ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿಯಾಗಿ ಹೊರ ಬಿಡುತ್ತಿರುವ ನೀರಿನಿಂದಾಗಿ ನದಿ ತಟದ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ. ಈಗಾಗಲೇ ಜಿಲ್ಲಾಡಳಿತದಿಂದ ನದಿ ತಟದ ಗ್ರಾಮಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

ABOUT THE AUTHOR

...view details