ಬೆಂಗಳೂರು : ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ದಿನಕೂಲಿ ಕೆಲಸ ಮಾಡುವ 7 ಮಹಿಳೆಯರು ಸಾವನ್ನಪ್ಪಿದ್ದಾರೆ, ಈ ಕುರಿತು ಟ್ವೀಟ್ ಮಾಡಿರುವ, ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅಘಾತಕಾರಿ ವಿಷಯ ಕೇಳಿ ಬಹಳ ನೋವಾಗುತ್ತಿದೆ ಎಲ್ಲರೂ ಕೃಷಿ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಮರಳುತ್ತಿರುವಾಗ ಈ ದುರಂತ ಸಂಭವಿಸಿದೆ.
ಅಗತ್ಯ ನೆರವಿಗೆ ಆಗ್ರಹ:ಕೂಲಿ ಮಾಡಿಕೊಂಡು ಬದುಕಿದ್ದ ಇವರ ಕುಟುಂಬಗಳಲ್ಲಿ ಈಗ ಕತ್ತಲು ಆವರಿಸಿದೆ. ರಾಜ್ಯ ಸರಕಾರ ಕೂಡಲೇ ಈ ಕುಟುಂಬಗಳ ನೆರವಿಗೆ ಧಾವಿಸಿ ಅಗತ್ಯ ಪರಿಹಾರ, ಮತ್ತಿತರೆ ನೆರವು ನೀಡಬೇಕು ಮತ್ತು ಎಲ್ಲ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.