ಬೀದರ್: ಹೊಸ ವಿಮಾನಯಾನ ಆರಂಭವಾಗಿದ್ದು, ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬೀದರ್ಗೆ ಆಗಮಿಸಿದ ವಿಮಾನಕ್ಕೆ ಟ್ರೂಜೆಟ್ ಕಂಪನಿ ಸಿಬ್ಬಂದಿ ನೀರು ಹಾರಿಸಿ ಸ್ವಾಗತಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೂತನ ವಿಮಾನದಲ್ಲಿ ಪ್ರಯಾಣಿಸಿ ಬೀದರ್ಗೆ ಆಗಮಿಸಿದರು. ಬೀದರ್ ವಾಯುನೆಲೆಗೆ ಬಂದ ವಿಮಾನವನ್ನು ಟ್ರೂಜೆಟ್ ಸಿಬ್ಬಂದಿ ವಾಡಿಕೆಯಂತೆ ಎರಡು ಅಗ್ನಿ ಶಾಮಕ ದಳದ ವಾಹನಗಳಿಂದ ಬಾನೆತ್ತರದಲ್ಲಿ ನೀರು ಹಾರಿಸಿ ವಿಮಾನಕ್ಕೆ ಭರ್ಜರಿಯಾಗಿ ಸ್ವಾಗತಿಸಿದರು.