ಬೀದರ್ :ಜಿಲ್ಲೆಯ ಭಾಲ್ಕಿ ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ನಡೆದ ಪಲ್ಲಕ್ಕಿ ಉತ್ಸವ ಹಾಗೂ ಅಗ್ಗಿ ತುಳಿಯುವ ಕಾರ್ಯ ಅದ್ದೂರಿಯಾಗಿ ಜರುಗಿತು.
ಅದ್ದೂರಿಯಾಗಿ ಜರುಗಿದ ಭಾಲ್ಕಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ.. - ಬೀದರ್ ಭಾಲ್ಕಿ ಶ್ರೀ ವೀರಭದ್ರೇಶ್ವ ಜಾತ್ರೆ ಸುದ್ದಿ
ಭಾಲ್ಕಿ ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ನಡೆದ ಪಲ್ಲಕ್ಕಿ ಉತ್ಸವ ಹಾಗೂ ಅಗ್ಗಿ ತುಳಿಯುವ ಕಾರ್ಯ ಅದ್ದೂರಿಯಾಗಿ ಜರುಗಿತು. ಮೆರವಣಿಗೆಯಲ್ಲಿ ಪುರವಂತರರು ಕೈಯಲ್ಲಿ ಕಬ್ಬಿಣದ ಸಲಾಕೆಗಳನ್ನು ಬಾಯಿ, ಕೈಯಲ್ಲಿ ತಿವಿದುಕೊಂಡು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾದರು.
ಪಟ್ಟಣದ ಕೋಟೆ ಆವರಣದಲ್ಲಿ ಅಗ್ಗಿ ತುಳಿಯುವ ಕಾರ್ಯಕ್ಕೆ ಹಿರಿಯ ಮುಖಂಡ ರಾಚಪ್ಪ ಪಾಟೀಲ್ ಗೌಂಡಗಾಂವ್ ಚಾಲನೆ ನೀಡಿದರು. ಇದ್ದಕ್ಕೂ ಮುನ್ನ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕಿ ಉತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಿತು. ಚಳಿ ಲೆಕ್ಕಿಸದೆ ಅಪಾರ ಭಕ್ತ ಸಾಗರವೇ ಉತ್ಸವದಲ್ಲಿ ಭಾಗಿಯಾಗಿತ್ತು.
ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ ನಿಮಿತ್ತ ನಡೆದ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು. ಜೊತೆಗೆ ಮೆರವಣಿಗೆಯಲ್ಲಿ ಪುರವಂತರು ಕೈಯಲ್ಲಿ ಚಾಕು, ಕಬ್ಬಿಣದ ಸಲಾಕೆಗಳನ್ನು ಬಾಯಿ, ಕೈಯಲ್ಲಿ ತಿವಿದುಕೊಂಡು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾದ್ರು.