ಬೀದರ್: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಯ ಮತದಾನ ಆರಂಭವಾಗಿದ್ದು 95ರ ಹರೆಯದ ವೃದ್ಧೆ ಮತದಾನ ಮಾಡಿ ಉತ್ಸಾಹ ಇಮ್ಮಡಿಗೊಳಿಸಿದ್ದಾರೆ.
ಬಾಳ ಸಂಜೆಯಲ್ಲಿದ್ರೂ ಹಕ್ಕು ಕಳೆದುಕೊಳ್ಳದ ಹಿರಿಯ ಜೀವ.. ಬೀದರ್ನಲ್ಲಿ 95ರ ವೃದ್ಧೆಯಿಂದ ಮತದಾನ - Bidar District
ಮತದಾನ ದಿನ ಸರ್ಕಾರಿ ರಜೆ ಕೊಟ್ಟರೂ ಎಷ್ಟೋ ಮಂದಿ ಮನೆಯಲ್ಲೋ ಇಲ್ಲ ಹೊರಗೆಲ್ಲೋ ತೆರಳ್ತಾರೆ. ಆದರೆ, ಇಲ್ಲೊಬ್ಬ ಅಜ್ಜಿ ಮಾತ್ರ ತಾನು ಹಣ್ಣು ಹಣ್ಣಾಗಿದ್ರೂ ಮತದಾನ ಮಾಡೋದನ್ನ ಮರೆತಿಲ್ಲ..
ಮತ ಚಲಾಯಿಸಿದ 95ರ ವೃದ್ಧೆ
ತಾಲೂಕಿನ ಗಾದಗಿ ಗ್ರಾಪಂ ವ್ಯಾಪ್ತಿಯ ಮಾಮನಕೇರಿ ಗ್ರಾಮದ ಮತಗಟ್ಟೆಯಲ್ಲಿ ಲಕ್ಷ್ಮಿ ಎಂಬ ವೃದ್ಧೆ ಇಳಿ ವಯಸ್ಸಿನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲೆಯ ಔರಾದ್, ಕಮಲನಗರ ಹಾಗೂ ಬೀದರ್ ತಾಲೂಕಿನ 72 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೀತಿದೆ. 509 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆಯಿಂದಲೂ ಮತದಾರರು ಉತ್ಸುಕತೆಯಿಂದಲೇ ಮತಗಟ್ಟೆಗಳತ್ತ ಬರುತ್ತಿದ್ದಾರೆ.