ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತಿ ಭ್ರಷ್ಟಾಚಾರ:ಎಸಿಬಿ ಬಲೆಗೆ ಬಿದ್ದ PDO - undefined

ಬೀದರ್ ತಾಲೂಕಿನ ಎದ್ಲಾಪೂರ ಗ್ರಾಮ ಪಂಚಾಯತಿ ಪಿಡಿಓ ಸಂಗೀತಾ ದೇಶಮುಖ್ ಲಂಚ ಸ್ವೀಕರಿಸುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಪಿಡಿಓ ಸಂಗೀತಾ ದೇಶಮುಖ್

By

Published : May 22, 2019, 9:06 PM IST

ಬೀದರ್: ಬಡವರಿಗಾಗಿ ಸರ್ಕಾರ ನಿರ್ಮಿಸಿಕೊಡುತ್ತಿರುವ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಂದ ಗ್ರಾಮ ಪಂಚಾಯತಿ ಪಿಡಿಒ ಲಂಚದ ಹಣ ಸ್ವೀಕರಿಸುತ್ತಿರುವಾಗ ACB ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಎದ್ಲಾಪೂರ ಗ್ರಾಮ ಪಂಚಾಯತಿ ಪಿಡಿಓ ಸಂಗೀತಾ ದೇಶಮುಖ್ ಎಂಬಾಕೆ ಎಸಿಬಿ ಬಲೆಗೆ ಬಿದ್ದಿರುವ ಮಹಿಳಾ ಅಧಿಕಾರಿ.

ಈಕೆ ಬಸವ ವಸತಿ ಯೋಜನೆಯ ಹಣ ಬಿಡುಗಡೆ ಮಾಡಲು ಫಲಾನುಭವಿಯೊಬ್ಬರಿಗೆ 12 ಸಾವಿರ ಹಣದ ಬೇಡಿಕೆ ಇಟ್ಟಿದ್ದಾರೆ. ಎಷ್ಟೇ ಮನವಿ ಮಾಡಿದ್ರು ಲಂಚದ ಹಣ ಕೊಡುವವರೆಗೆ ಯೋಜನೆಯ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಸತಾಯಿಸಿದ್ದಾರೆ ಎಂದು ನೊಂದ ಗೋವಿಂದ ಎಂಬವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ದಾಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಕಲ್ಬುರ್ಗಿ ಎಸ್.ಪಿ ಜ್ಯೋತಿ, ಡಿವೈಎಸ್ ಪಿ.ಬಿ.ವಿ ಪಟೇಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಆರೋಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details