ಬೀದರ್:ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ವೃದ್ಧನೋರ್ವ ಬಲಿಯಾಗಿರುವ ಹಿನ್ನಲೆ ನಗರದಿಂದ ಕಲಬುರಗಿಗೆ ತೆರಳುವ ಬಸ್ಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿವೆ.
ಕೊರೊನಾ ಆತಂಕ... ಕಲಬುರಗಿ ಕಡೆ ತೆರಳುವ ಸಾರಿಗೆ ಬಸ್ಗಳು ಖಾಲಿ ಖಾಲಿ! - ಕೊರೊನಾ ಸೊಂಕು ಹರಡುವ ಭೀತಿಯಿಂದ ಪ್ರಯಾಣಿಕರು
ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವನಪ್ಪಿರುವ ಹಿನ್ನಲೆ ನಗರದಿಂದ ಕಲಬುರಗಿಗೆ ತೆರಳುವ ಬಸ್ ಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ.

ಪ್ರತಿ ದಿನ 70ಕ್ಕೂ ಅಧಿಕ ಬಸ್ಗಳ ಓಡಾಟವಾಗ್ತಿದ್ದ ಬೀದರ್-ಕಲಬುರಗಿ ಮಧ್ಯ ಈಗ ಕೇವಲ 20 ಬಸ್ಗಳು ಸಂಚರಿಸುತ್ತಿದ್ರೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಸೋಂಕು ಹರಡುವ ಭೀತಿಯಿಂದ ಪ್ರಯಾಣಿಕರು ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಸ್ನಲ್ಲಿ ಪ್ರಯಾಣಿಸುವಾಗ ಕೆಲವೊಂದಿಷ್ಟು ಜನರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪ್ರಯಾಣ ಮಾಡುತ್ತಿದ್ದು, ಸೋಂಕಿನ ಭೀತಿಯೂ ಇದೆ ಅಂತಿದ್ದಾರೆ.
ಪ್ರತಿ ವರ್ಷ ಕಲಬುರಗಿಯಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ದಿನಗಳಲ್ಲಿ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ಗಳ ಓಡಾಟ ಹೆಚ್ಚಾಗಿರುತ್ತಿತ್ತು. ಪ್ರಯಾಣಿಕರು ಕೂಡ ಹೆಚ್ಚಾಗಿ ಇರ್ತಾ ಇದ್ದರು. ಆದ್ರೆ ಈಗ ಕೊರೊನಾ ವೈರಸ್ನಿಂದ ಓರ್ವ ಸಾವನ್ನಪ್ಪಿದ್ದಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂದು ಕಂಡಕ್ಟರ್ವೋರ್ವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.