ಕರ್ನಾಟಕ

karnataka

ETV Bharat / state

ಬಂಗಾರ ಕಳವು ಪ್ರಕರಣ: 24 ಗಂಟೆಯಲ್ಲಿ ಆರೋಪಿ ಬಂಧನ - ಬಂಗಾರ ಕಳವು ಪ್ರಕರಣ

ಬೀದರ್​ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಬಂಗಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲಿ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Rk_n_bdr
ಬಂಗಾರ ಕಳವು ಪ್ರಕರಣ

By

Published : Nov 29, 2022, 10:47 PM IST

ಬೀದರ್: ನಗರದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ನಡೆದ ಬಂಗಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲ್ಯಾಣ ಮಂಟಪದಲ್ಲಿ ನಡೆದ ಚಿನ್ನ ಕಳವು ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಸಿಸಿ ಕ್ಯಾಮರಾ ಸಹಾಯದ ಮೂಲಕ ಪೊಲೀಸರು 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ 3.80 ಲಕ್ಷ ರೂ. ಮೌಲ್ಯದ 76 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಕೆ.ಎಂ.ಸತೀಶ್ ಮಾರ್ಗದರ್ಶನದಲ್ಲಿ ನೂತನ ನಗರ ಠಾಣೆ ಸಿಪಿಐ ಕಪಿಲದೇವ್ ನೇತೃತ್ವದ ತಂಡದಲ್ಲಿ ಪಿಎಸ್‍ಐಗಳಾದ ರಾಜಪ್ಪ ಮುದ್ದಾ, ಶಿವಪ್ಪ ಮೇಟಿ, ತಸ್ಲೀಮ್ ಸುಲ್ತಾನಾ ಹಾಗೂ ಸಿಬ್ಬಂದಿ ವಿಶ್ವನಾಥ, ನಿಂಗಪ್ಪ, ಶರಣಪ್ಪ, ಭರತ್, ವಿಷ್ಣು, ಶೇಖ್ ಮೋದಿನ್, ಸುನೀಲ ರಾಠೋಡ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇನ್ನು ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಎಸ್ಪಿ ಡೆಕ್ಕಾ ಕಿಶೋರ ಬಾಬು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ನಕಲಿ ಗೋಲ್ಡ್ ಗ್ಯಾಂಗ್​ನಿಂದ ಮೋಸ ಹೋದಿರಾ ಜೋಕೆ.. ವಂಚಕರ ಬಗ್ಗೆ ದಾವಣಗೆರೆ ಎಸ್​ಪಿ ಮಾಹಿತಿ

ABOUT THE AUTHOR

...view details