ಕರ್ನಾಟಕ

karnataka

ಗೊಗ್ಗವ್ವೆ ಕೆರೆಗೆ ಮರುಜೀವ... ಗ್ರಾಮಸ್ಥರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

By

Published : Mar 23, 2021, 6:09 PM IST

ಲಾಕ್​​ಡೌನ್ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ 1.5 ಎಕರೆ ವಿಸ್ತೀರ್ಣದ ಗೊಗ್ಗವ್ವೆ ಕೆರೆಗೆ ಮರುಜೀವ ನೀಡಲಾಗಿತ್ತು. ವಾಕಿಂಗ್ ಪಾತ್, ಉದ್ಯಾನ, ಬೋಟಿಂಗ್ ಮೂಲಕ ಈ ಸ್ಥಳವನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆ ಈ ಗ್ರಾಮ ಪಂಚಾಯತ್​ ಸಂವಾದಕ್ಕೆ ಆಯ್ಕೆಯಾಗಿದ್ದು, ಗ್ರಾಮಸ್ಥರಿಗೆ ಹೆಮ್ಮೆಯ ವಿಚಾರ. ಗ್ರಾಮಸ್ಥರ ಈ ಕಾರ್ಯವನ್ನು ಪ್ರಧಾನಿ ಮೋದಿಯವರೇ ಕೊಂಡಾಡಿದ್ದಾರೆ.

Goggawwe Lake Developed by Dhoopat Mahagav Village people
ಗೊಗ್ಗವ್ವೆ ಕೆರೆಗೆ ಮರುಜೀವ...ಗ್ರಾಮಸ್ಥರ ಕಾರ್ಯಕ್ಕೆ ಪ್ರಧಾನಿಯಿಂದ ಮೆಚ್ಚುಗೆ

ಬೀದರ್​​: ಬಯಲುಸೀಮೆ ಪ್ರದೇಶಗಳಲ್ಲೊಂದಾದ ಬೀದರ್​ ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ಸಾಕು ನೀರಿನ ಬವಣೆ ಹೇಳತೀರದಂತಾಗುತ್ತದೆ. ಬೇಸಿಗೆಯಲ್ಲಿ ಅದೆಷ್ಟೋ ಕೆರೆಗಳು ಬತ್ತಿ ಹೋಗುವುದುಂಟು. ಇಂತಹ ಸಮಸ್ಯೆಗಳ ನಡುವೆ ಹಾಳು ಬಿದ್ದ ಕೆರೆಗೆ ಪುನರ್ಜೀವ ನೀಡುವ ಕೆಲಸವನ್ನು ಔರಾದ್ ತಾಲೂಕಿನ ಧೂಪತ್​​​ ಮಹಾಗಾಂವ್ ಗ್ರಾಮ ಪಂಚಾಯತ್​ ಮಾಡಿದೆ. ಈ ಕಾರ್ಯಕ್ಕೆ ದೇಶದ ಪ್ರಧಾನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು, 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ಕೊಡಲಾಗಿದೆ. ಕೆರೆ ಹೊಳೆತ್ತುವುದು ಸೇರಿದಂತೆ ವಾಕಿಂಗ್ ಪಾತ್, ಉದ್ಯಾನವನ, ಬೋಟಿಂಗ್ ಸೈಟ್ ನಿರ್ಮಾಣ ಮಾಡಲಾಗಿದೆ. ಇದಕ್ಕೆ 10 ಲಕ್ಷ ರೂ. ಹಣ ವೆಚ್ಚವಾಗಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಿಕೊಳ್ಳಲಾಗಿದೆ.

ಗೊಗ್ಗವ್ವೆ ಕೆರೆಗೆ ಮರುಜೀವ... ಗ್ರಾಮಸ್ಥರ ಕಾರ್ಯಕ್ಕೆ ಪ್ರಧಾನಿಯಿಂದ ಮೆಚ್ಚುಗೆ

ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನೆಲೆ ಕೆರೆಗಳಿಗೆ ಮರುಜೀವ ನೀಡಿರುವ ಧೂಪತ್​​​ ಮಹಾಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರ ಜೊತೆ ಸಂವಾದ ನಡೆಸಿ 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ನೀಡಿದ ವಿಷಯದ ಮೇಲೆ ಚರ್ಚಿಸಿದ್ರು. ಈ ಕಾರ್ಯವನ್ನು ಮೆಚ್ಚಿದ ಪ್ರಧಾನಿ, ಗ್ರಾಮ ಪಂಚಾಯತ್​​ ಅಧ್ಯಕ್ಷ ಶ್ರೀನಿವಾಸ ಮತ್ತು ಗ್ರಾಮಸ್ಥರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೀದರ್ ಜಿಲ್ಲೆಯ ಗೊಗ್ಗವ್ವೆ ಕೆರೆಗೆ ಮರುಜೀವ: ಪ್ರಧಾನಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ್​ ಗಿರಿ

ಒಟ್ಟಾರೆ ಬೇಸಿಗೆಯಲ್ಲಿ ನೀರಿನ ಬವಣೆ ಎದುರಿಸುವ ಅದೆಷ್ಟೋ ಗ್ರಾಮಗಳಿಗೆ ಜಲಮೂಲವನ್ನು ಹಿಡಿದಿಟ್ಟಿರುವ ಈ ಊರಿನ ಜನರು ಮಾದರಿಯಾಗಿದ್ದಾರೆ. ಇವರ ನಡೆ ಅನುಸರಿಸಿದರೆ ನೀರಿನ ಸಂಗ್ರಹಣೆ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು.

ABOUT THE AUTHOR

...view details