ಕರ್ನಾಟಕ

karnataka

ETV Bharat / state

ಹುತಾತ್ಮ ಯೋಧನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ - basavakalyana latest news

ಹುತಾತ್ಮ ಯೋಧನಿಗೆ ಜಿಲ್ಲಾ ಸಶಸ್ತ್ರ ಪಡೆಯಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಹಾಗೆ ಭಾರತೀಯ ಸೇನೆ ಯೋಧರು, ಬೀದರ್ ವಾಯುನೆಲೆ ಕೇಂದ್ರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು..

Funeral with government honour for the martyr soldier
ಹುತಾತ್ಮ ಯೋಧನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

By

Published : Sep 27, 2021, 10:00 PM IST

ಬಸವಕಲ್ಯಾಣ: ಜಮ್ಮು-ಕಾಶ್ಮೀರದಲ್ಲಿ ತೀವ್ರ ಚಳಿಗೆ ಹುತಾತ್ಮರಾದ ಭಾರತೀಯ ಸೇನಾ ಪಡೆಯ ಯೋಧ ಸುಬೇದಾರ್ ಪ್ರಮೋದ ಸೂರ್ಯವಂಶಿ (45) ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲೂಕಿನ ಜಾಜನಮುಗಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ಭಾರತ ಮಾತಾಕಿ ಜೈ, ಒಂದೇ ಮಾತರಂ, ಅಮರ್ ರಹೇ, ಅಮರ್ ರಹೇ.. ಪ್ರಮೋದ ಸೂರ್ಯವಂಶಿ ಅಮರ್ ರಹೇ ಘೋಷಣೆಗಳೊಂದಿಗೆ ಅವರ ಜಮೀನಿನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಗ್ರಾಮದ ಜನ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಜನರು ಅಗಲಿದ ಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು.

ಹುತಾತ್ಮ ಯೋಧನಿಗೆ ಜಿಲ್ಲಾ ಸಶಸ್ತ್ರ ಪಡೆಯಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಹಾಗೆ ಭಾರತೀಯ ಸೇನೆ ಯೋಧರು, ಬೀದರ್ ವಾಯುನೆಲೆ ಕೇಂದ್ರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಹುತಾತ್ಮ ಯೋಧನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಶಾಸಕರಾದ ಶರಣು ಸಲಗರ, ಎಂಎಲ್​ಸಿ ವಿಜಯಸಿಂಗ್, ತಹಶೀಲ್ದಾರ್​​ ಸಾವಿತ್ರಿ ಸಲಗರ, ಕೈ ಮುಖಂಡರಾದ ಮಾಲಾ ನಾರಾಯಣರಾವ್, ಸಂಜಯ ಪಟವಾರಿ, ಬಾಬು ಹೊನ್ನಾನಾಯಕ, ನೀಲಕಂಠ ರಾಠೋಡ್ ಸೇರಿದಂತೆ ಪ್ರಮುಖರು, ಅಧಿಕಾರಿಗಳೂ ಈ ವೇಳೆ ಅಂತಿಮ ಗೌರವ ಸಲ್ಲಿಸಿದರು.

ABOUT THE AUTHOR

...view details