ಬೀದರ್: ಲಾಕ್ಡೌನ್ ವೇಳೆಯಲ್ಲಿ ಬಡವರಿಗೆ ಸರಬರಾಜು ಮಾಡಲು ತಂದಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, 290 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಕೊಳಾರ ಕೈಗಾರಿಕಾ ಪ್ರದೇಶದ ಅಮ್ಮಾ ಎಂಟರ್ಪ್ರೈಸ್ ಕಂಪನಿಯ ಗೊದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆಯಲ್ಲಿ 286 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ 57 ಕ್ವಿಂಟಲ್ ಗೋಧಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಕ್ರಮಕ್ಕೆ ಬಳಸಿದ್ದ ಲಾರಿ, ಜೀಪ್ವೊಂದನ್ನು ಜಪ್ತಿ ಮಾಡಿಕೊಂಡ ಅಧಿಕಾರಿಗಳು ನ್ಯೂಟೌನ್ ಪೊಲೀಸರಿಗೆ ಆಹಾರ ನಿರೀಕ್ಷಕ ಅರುಣ್ ಕುಮಾರ್ ನೀಡಿದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈಶ್ವರ ಖಂಡ್ರೆ ಅಸಮಾಧಾನ:ಬಡವರ ಹೊಟ್ಟೆಗೆ ಸೇರಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಸಾಗಾಟ ಮಾಡಿ ದಂಧೆ ಮಾಡುತ್ತಿರುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಡಿತರ ಅಕ್ಮಿ, ಗೋಧಿ, ಬೆಳೆ ಕಾಳು ಅಕ್ರಮ ಮಾರಾಟ ಮಾಡುವ ಮಾಫೀಯಾ ಬಗ್ಗೆ ಆಳವಾಗಿ ತನಿಖೆಯಾಗಬೇಕು. ಇದೊಂದು ದೊಡ್ಡ ಮಟ್ಟದ ಜಾಲವಾಗಿದ್ದು, ಲೋಕಾಯುಕ್ತ ಅಥವಾ ಎಸ್ಐಟಿಯಿಂದ ತನಿಖೆ ನಡೆಸುವಂತೆ ಖಂಡ್ರೆ ಒತ್ತಾಯಿಸಿದ್ದಾರೆ.